ಬಂಟ್ವಾಳ: ಯಕ್ಷಗಾನ ನೋಡಲು ಹೋದ ವ್ಯಕ್ತಿ ಶವವಾಗಿ ಪತ್ತೆ

(ನ್ಯೂಸ್ ಕಡಬ) newskadaba.comಬಂಟ್ವಾಳ,ಫೆ.05.ಯಕ್ಷಗಾನ ನೋಡಲು ಹೋದವರು  ನದಿಗೆ ಬಿದ್ದು ಮೃತ ಪಟ್ಟ ಘಟನೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಬಂಟ್ವಾಳ ತಾಲೂಕು ಕಸಬ ಗ್ರಾಮದ ಎಸ್.ವಿ.ಎಸ್ ಕಾಲೇಜು ರಸ್ತೆ  ನಿವಾಸಿ ಪ್ರವೀಣ್  ಕುಮಾರ್ ಎಂದು ಗುರುತಿಸಲಾಗಿದೆ.

ಪ್ರವೀಣ್  ಕುಮಾರ್ ರವರು ಸ್ಪರ್ಶ ಕಲಾಮಂದಿರದಲ್ಲಿನ ನಡೆಯುವ ಯಕ್ಷಗಾನ  ಸಂಜೆ  ವೇಳೆ ಯಕ್ಷಗಾನ ನೋಡಲೆಂದು  ಮನೆಯಿಂದ ತೆರಳಿದ್ದರು. ಆದರೆ ತುಂಬಾ ಹೊತ್ತಾದರೂ ಮನೆಗೆ ಹಿಂತಿರುಗದ ಕಾರಣ ಮನೆಯವರು ಹುಡುಕಾಡಿದಾಗ ಮೂಡ ಗ್ರಾಮದ ನೇತ್ರಾವತಿ ನದಿಯ ಹೊಸ ಸೇತುವೆಯ ಬಳಿ ಪ್ರವೀಣ್ ಕುಮಾರ್ ರ ಮೃತ ದೇಹ ಪತ್ತೆಯಾಗಿದೆ.ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top