ಕಡಬ: 17ನೇ ವರ್ಷದ ಸೋಣ ನಡಾವಳಿ, ದೈವಗಳ ನೇಮೋತ್ಸವ – ಷಷ್ಠಿ ಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಜ.16.ಕಡಬ: ಕಡಬ ಶ್ರೀ ಕಡಂಬಳಿತ್ತಾಯ ಸ್ವಾಮಿ, ಶ್ರೀ ಪುರುಷ ದೈವ ಮತ್ತು ಸಪರಿವಾರ ದೈವಗಳ ನೇಮೋತ್ಸವ, ಕಡಬ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಷಷ್ಠಿ ಪೂಜೆ ಜ.15ರಂದು ನಡೆಯಿತು.ಜ. 13ರಂದು ರಾತ್ರಿ ಕುಕ್ಕರೆಬೆಟ್ಟುವಿನಿಂದ ಶ್ರೀ ಕಡಂಬಳಿತ್ತಾಯ ಸ್ವಾಮಿಯವರ ಭಂಡಾರ ಹೊರಟು ಉದೇರಿ, ಅಜಲಡ್ಕ ಮಾರ್ಗವಾಗಿ ಮಾಲೇಶ್ವರ ಶ್ರೀ ವೀರಭದ್ರ ಸ್ವಾಮಿ ಸನ್ನಿಧಿಗೆ, ಕಡಬಗುತ್ತು ಮನೆಯಿಂದ ಶ್ರೀ ಪುರುಷ ದೈವ ಮತ್ತು ಇತರ ದೈವಗಳ ಭಂಡಾರ ಹೊರಟು ಕಡಬ ಮುಖ್ಯ ರಸ್ತೆಯಲ್ಲಿ ಸಾಗಿ, ಪಂಜ ಮಾರ್ಗವಾಗಿ ಮಾಲೇಶ್ವರ ಶ್ರೀ ವೀರಭದ್ರ ಸ್ವಾಮಿ ಸನ್ನಿಧಿಗೆ ಮೆರವಣಿಗೆಯಲ್ಲಿ ಶ್ರೀ ದೈವಗಳ ಭಂಡಾರ ತಂದು ಪುರಪೆರಿಯಡ್ಕ (ಮಾಲೇಶ್ವರ) ಶ್ರೀ ವೀರಭದ್ರ ಸ್ವಾಮಿ ಸನ್ನಿಧಿಯಲ್ಲಿ 17ನೇ ವರ್ಷದ ಸೋಣ ನಡಾವಳಿ, ಶ್ರೀ ಕಡಂಬಳಿತ್ತಾಯ ಸ್ವಾಮಿ, ಶ್ರೀ ಪುರುಷ, ಶ್ರೀ ಉದ್ರಾಂಡಿ ಹಾಗೂ ಪೊಟ್ಟ ದೈವಗಳ ನೇಮೋತ್ಸವ ನಡೆಯಿತು.

ಜ.15ರಂದು ಪೂರ್ವಾಹ್ನ ಕಡಬ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಷಷ್ಠಿ ಪೂಜೆ ಹಾಗೂ ಶಿರಾಡಿ, ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ನೇಮೋತ್ಸವ ಹಾಗೂ ಮಾರಿ ಪೂಜೆ ಪೂರ್ವ ಪದ್ಧತಿಯಂತೆ, ಪರಂಪರೆಯ ಮನೆತನ ಹಾಗೂ ಪರಿಚಾರಕ ವರ್ಗದವರ ನೇತೃತ್ವದಲ್ಲಿ ಜರುಗಿತು. ಕಡಬ ಗುತ್ತು ಪ್ರಧಾನ ಆಡಳಿತದಾರರಾದ ಕೆ.ರಾಜೇಂದ್ರ ಹೆಗ್ಡೆ, ಕಡಬ ಶ್ರೀ ಕಡಬಂಬಳಿತ್ತಾಯ ಸ್ವಾಮಿ ಶ್ರೀ ಪುರುಷ ದೈವ ಮತ್ತು ಇತರ ದೈವಗಳ ಜಾತ್ರಾ ಸಮಿತಿ ಅಧ್ಯಕ್ಷರಾದ ಬಿ. ಧರಣೇಂದ್ರ ಜೈನ್ ಬೆದ್ರಾಜೆ, ಕಾರ್ಯದರ್ಶಿ ಮನೋಜ್ ಗೌಡ ಆರಿಗ, ಜತೆ ಕಾರ್ಯದರ್ಶಿ ಲಕ್ಷ್ಮೀಶ ಗೌಡ ಆರಿಗ, ಖಜಾಂಜಿ ಕೆ.ರಮೇಶ್ ರಾವ್ ಹೊಸಮನೆ, ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಕಡಬ ಶ್ರೀ ಕಡಬಂಬಳಿತ್ತಾಯ ಸ್ವಾಮಿ ಶ್ರೀ ಪುರುಷ ದೈವ ಮತ್ತು ಇತರ ದೈವಗಳ ಜಾತ್ರಾ ಸಮಿತಿ ಉಪಾಧ್ಯಕ್ಷರಾದ ಅಶೋಕ್ ಆಳ್ವ ಬೆದ್ರಾಜೆ, ಮಾನ ನಾೈಕ್ ಕುಕ್ಕರಬೆಟ್ಟು, ಸತೀಶ್ ನಾಯಕ್ ಕಡಬ, ಕೃಷ್ಣಪ್ಪ ಮಡಿವಾಳ, ತಮ್ಮಯ್ಯ ಕುಂಬಾರ ಜಾಣಮನೆ, ಪೂವಪ್ಪ ಗೌಡ ಶೃತಿ ನಿಲಯ, ಕುಂಞಣ್ಣ ಕುಂಬಾರ ಮೂರಾಜೆ, ಗೋಪಾಲ ಪೂಜಾರಿ ಕಾರ್ಕಳ, ನಾಗೇಶ ಕಾಮತ್ ಏರಂತಿಲ, ನಾರಾಯಣ ರೈ ಕಳಾರ, ವೆಂಕಪ್ಪ ಗೌಡ ನಂದಗೋಕುಲ, ಬಾಲಕೃಷ್ಣ ಗೌಡ ಆರಿಗ, ರಮೇಶ್ ಗೌಡ ತುಂಬೆತಡ್ಕ, ಶ್ರೀ ಕಡಂಬಳಿತ್ತಾಯ ಸ್ವಾಮಿ ಆಡಳಿತದಾರರಾದ ತಮ್ಮಯ್ಯ ನಾೈಕ್ ಕುಕ್ಕರೆಬೆಟ್ಟು, ಕಲ್ಲುರ್ಟಿ, ಕಲ್ಕುಡ ದೈವಗಳ ಆಡಳಿತದಾರರಾದ ಮೋನಪ್ಪ ಕುಂಬಾರ, ಗೌರವ ಸಲಹೆಗಾರರಾದ ಸುಂದರ ಮಂಡೆಕರ, ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ನಿರ್ದೇಶಕ ಚಂದ್ರಶೇಖರ ಕರ್ಕೇರ, ಸೇರಿದಂತೆ ಆಡಳಿತ ಮಂಡಳಿ, ವ್ಯವಸ್ಥಾಪನ ಸಮಿತಿ, ಉತ್ಸವ ಸಮಿತಿ, ಭಜನಾ ಮಂಡಳಿ, ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು. ಅಣ್ಣು ಪಣೆಮಜಲು ಹಾಗೂ ಜನಾರ್ದನ ಪಣೆಮಜಲು ದೈವಗಳ ನರ್ತನೋತ್ಸವ ನೆರವೇರಿಸಿದರು.

Also Read  ಆರ್ಥಿಕ ಸಂಕಷ್ಟವೇ ಮುಳುವಾಯ್ತು ➤ ಬೋಟ್ ನಲ್ಲಿ ನೇಣು ಹಾಕಿಕೊಂಡ ಯುವಕ

error: Content is protected !!
Scroll to Top