ನೆಟ್ಟಣ: ಅಂಗನವಾಡಿ ಕೇಂದ್ರಕ್ಕೆ ಚಯರ್ ಕೊಡುಗೆ

(ನ್ಯೂಸ್ ಕಡಬ) newskadaba.com ಕಡಬ, ಜ.16. ಬಿಳಿನೆಲೆ ಗ್ರಾಮದ ನೆಟ್ಟಣ ಅಂಗನವಾಡಿ ಕೇಂದ್ರಕ್ಕೆ 12 ಚಯರ್ ನ್ನು ಕೊಡುಗೆಯಾಗಿ ಬಂಟ್ರ ನಿವೃತ್ತ ಸಿ.ಆರ್.ಪಿ. ಕಮಲ ಶ್ರೀನಿವಾಸ ವಾಲ್ತಾಜೆ ಜ.1ರಂದುಅಂಗನವಾಡಿ ಕಾರ್ಯಕರ್ತೆ ಮಲ್ಲಿಕ ರವರಿಗೆ ಹಸ್ತಾಂತರಿಸಿದರು. ಕೊಡುಗೆ ಸ್ವೀಕರಿಸಿದ ಕಾರ್ಯಕರ್ತೆ ಮಲ್ಲಿಕಾರವರು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿ ಭುವನೇಶ್ವರಿ ಹಾಗೂ ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು.

Scroll to Top