ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ರೆಡಿಯಾನ್ ಬೈಕ್ ಬಿಡುಗಡೆ ► 110 ಸಿಸಿ ಯ ರೆಡಿಯಾನ್ ಬೈಕ್ ಎಕ್ಸ್ ಶೋರೂಂ ಬೆಲೆ ಕೇವಲ 50 ಸಾವಿರ ರೂ.

(ನ್ಯೂಸ್ ಕಡಬ) newskadaba.com ಕಡಬ, ಜ.04. ದ್ವಿಚಕ್ರ ವಾಹನಗಳ ನಿರ್ಮಾಣದಲ್ಲಿಯೇ ಅಗ್ರ ಸ್ಥಾನ ಪಡೆದಿರುವ ಟಿವಿಎಸ್ ಕಂಪನಿಯು ಇದೀಗ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯಬಲ್ಲ ವಿನೂತನ ಮಾದರಿಯ ರೆಡಿಯನ್ ಬೈಕನ್ನು ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಗುರುವಾರದಂದು ಬಿಡುಗಡೆಗೊಳಿಸಲಾಯಿತು.

ಪ್ರಥಮ ಗ್ರಾಹಕರಾಗಿ ರೆಡಿಯಾನ್ ವಾಹನವನ್ನು ನೆಟ್ಟಣ ನಿವಾಸಿ ರೇಗನ್ ಹಾಗೂ ಕೋಡಿಂಬಾಳ ನಿವಾಸಿ ದೇವಣ್ಣ ಮತ್ತು ನೂತನವಾಗಿ ಬಿಡುಗಡೆಗೊಂಡ ಎಕ್ಸೆಲ್ ಇಲೆಕ್ಟ್ರಿಕ್ ಸ್ಟಾರ್ಟ್ ವಾಹನವನ್ನು ನಿಂತಿಕಲ್ಲು ನಿವಾಸಿ ಮಹೇಶ್ ಪಡೆದುಕೊಂಡರು. 100 ಸಿಸಿ ವಿಭಾಗದ ಬೈಕ್ ಮಾರಾಟದಲ್ಲಿ ಹೊಸ ಬದಲಾವಣೆ ತರಲು ಮುಂದಾಗಿರುವ ಟಿವಿಯಸ್ ಸಂಸ್ಥೆಯು ರೆಡಿಯನ್ ಬೈಕ್ ಬಿಡುಗಡೆ ಮಾಡಿದೆ. ಈ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿರುವ ಟಿವಿಎಸ್ ಸಂಸ್ಥೆಯು ಅತೀ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ವಿನ್ಯಾಸದ ರೆಡಿಯನ್ ಬೈಕನ್ನು ಅಭಿವೃದ್ಧಿಗೊಳಿಸಿದ್ದು, ಬೈಕ್ ನಲ್ಲಿ ಒದಗಿಸಲಾಗಿರುವ ಆಕರ್ಷಕ ಸೌಲಭ್ಯಗಳು ಗ್ರಾಹಕರನ್ನು ಮೊದಲ ನೋಟದಲ್ಲೇ ಸೆಳೆಯುತ್ತಿವೆ.

Also Read  ವೈವಾಹಿಕ ಜೀವನದಲ್ಲಿ ಯಶಸ್ವಿಯಾಗಲು ಪುರುಷರು ಯಾವ ಗುಣಗಳನ್ನು ಹೊಂದಿರಬೇಕು ಗೊತ್ತೇ ?

ಹೊಸ ಬ್ರೇಕಿಂಗ್ ಸಿಸ್ಟಂ: ಹೆಚ್ಚುತ್ತಿರುವ ಸ್ಕಿಡಿಂಗ್ ತೊಂದರೆಯನ್ನು ತಪ್ಪಿಸಲು ಸಿರಿಕ್ರೊ ನೈಸ್ಟ್ ಬ್ರೇಕಿಂಗ್ ಟೆಕ್ನಾಲಜಿಯೊಂದಿಗೆ ಬೈಕಿನ ಎರಡು ಬದಿ ಚಕ್ರಗಳಲ್ಲೂ ಡ್ರಮ್ ಬ್ರೇಕ್ ಬಳಕೆ ಮಾಡಲಾಗಿದ್ದು, ಎರಡೂ ಬ್ರೇಕ್ ಗಳು ಒಟ್ಟಿಗೆ ಕಾರ್ಯಾಚರಿಸಲಿವೆ. ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಪ್ರೋಕ್ಟ್ ಮತ್ತು ಹಿಂಭಾಗದಲ್ಲಿ ಐದು ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೈಡ್ರಾಲಿಕ್ ಸಸ್ಸೆನ್ ನೀಡಲಾಗಿದೆ. 1,265 ಎಂ.ಎಂ ಎತ್ತರ ಹೊಂದಿರುವ ಟಿವಿಎಸ್ ರೆಡಿಯಾನ್ ಬೈಕ್ ಗಳು 180 ಎಂ.ಎಂ. ಗ್ರೌಂಡ್ ಕ್ಲಿಯರೆನ್ಸ್ ನೊಂದಿಗೆ ಸೈಡ್ ಸ್ಟಾಂಡ್ ಇಂಡಿಕೇಟರ್, ಎಲೆಕ್ಟ್ರಿಕ್ ಸ್ಟಾರ್ಟ್, 18 ಇಂಚಿನ ಅಲಾಯ್ ಚಕ್ರಗಳು, ಡ್ಯುರಾ ಗ್ರಿಪ್ ಟೈರ್ ಗಳು, ಯುಎಸ್ ಬಿ ಚಾರ್ಚಿಂಗ್ ಸ್ಪಾಟ್ ಸೇರಿದಂತೆ ಆಕರ್ಷಕ ಸೀಟಿನ ವ್ಯವಸ್ಥೆ ಹೊಂದಿದೆ. 110 ಸಿಸಿ ಯೊಂದಿಗೆ 74 ಕಿ.ಮೀ. ಮೈಲೇಜ್ ನೀಡಲಿರುವ ರೆಡಿಯಾನ್ ಬೈಕಿನ ಎಕ್ಸ್ ಶೋರೂಂ ಬೆಲೆ 49999 ರೂ‌. ಗಳಾಗಿವೆ. ಟಿವಿಎಸ್ ರೆಡಿಯಾನ್ ಬೈಕ್ ಗಳು ಬಿಳಿ, ಬೀಜ್, ಪರ್ಪಲ್ ಮತ್ತು ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Also Read  ಬಿಎಸ್ಎನ್ಎಲ್ ಬಿಗ್ ಆಫರ್; ಕೇವಲ 7 ರೂಪಾಯಿನಲ್ಲಿ ಒಂದು ವರ್ಷಕ್ಕೆ ರೀಚಾರ್ಜ್

ಒಟ್ಟಿನಲ್ಲಿ ಕ್ಲಾಸಿಕ್ ಸ್ಟೆಲ್ ನಲ್ಲಿ ಸಿದ್ಧವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಟಿವಿಎಸ್ ರೆಡಿಯಾನ್ ಬೈಕ್ ಗಳು ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಆಯ್ಕೆಯಾಗುವ ಎಲ್ಲಾ ಗುಣಗಳನ್ನು ಹೊಂದಿದೆ. ಹೊಸ ರೆಡಿಯಾನ್ ಬೈಕ್ಗಳು ಪ್ರದರ್ಶನ ಹಾಗೂ ಟೆಸ್ಟ್ ಡ್ರೈವ್ ಗೆ ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ಕಡಬದ ಟಿವಿಎಸ್ ಶೋರೂಂ ಅಡಿಗ ಮೋಟಾರ್ಸ್ ಅಥವಾ 7618766636 ನಂಬರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top