►► ಉದ್ಯೋಗ ಮಾಹಿತಿ ‘ಕೌಶಲ್ಯ ಕರ್ನಾಟಕ’ ನಿರುದ್ಯೋಗಿಗಳಿಗೆ ಉದ್ಯೋಗ ಯೋಜನೆ ► ಸ್ವಯಂ ಉದ್ಯೋಗ ಹೊಂದಲು ಸುವರ್ಣ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ‌‌.09. ಕ.ರ.ರ.ಸಾ.ಸಂಸ್ಥೆ, ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನ ಇಲ್ಲಿ ಸರ್ಕಾರದ ಕೌಶಲ್ಯ ಕರ್ನಾಟಕ ಯೋಜನೆಯಡಿ ನಿರುದ್ಯೋಗಿ ಯುವಕ-ಯುವತಿಯವರಿಗೆ ಉಚಿತವಾಗಿ ಭಾರಿ ವಾಹನ, ಲಘುವಾಹನ ಹಾಗೂ ತಾಂತ್ರಿಕ ವೃತ್ತಿಗಳಲ್ಲಿ (ಆಟೋ, ವೆಲ್ಡರ್, ಆಟೋ, ಮೆಕ್ಯಾನಿಕ್, ಆಟೋ ಎಲೆಕ್ಟ್ರೀಷಿಯನ್, ಟೈರ್ ಫಿಟ್ಟರ್) ತರಬೇತಿ ನೀಡಿ ನಿರುದ್ಯೋಗಿಗಳಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವ ಮೂಲಕ ಸರ್ಕಾರಿ/ಅರೆ ಸರ್ಕಾರಿ/ಖಾಸಗಿ ಸಂಸ್ಥೆಗಳಲ್ಲಿ, ಸ್ವಯಂ ಉದ್ಯೋಗವನ್ನು ಹೊಂದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿ ಅವಧಿಯಲ್ಲಿ ಉಚಿತ ಊಟೋಪಚಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿಯನ್ನು ಆನ್‍ಲೈನ್ ಮೂಲಕ www.kaushalkar.com ರಲ್ಲಿ ಸಲ್ಲಿಸಬಹುದಾಗಿರುತ್ತದೆ. ಅಥವಾ ಕಚೇರಿ ಅವಧಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಹಕಾರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಕರಾರಸಾಸಂಸ್ಥೆ, ಪ್ರಾದೇಶಿಕ ತರಬೇತಿ ಕೇಂದ್ರ, ಡೈರಿ ವೃತ್ತ, ರಿಂಗ್ ರಸ್ತೆ, ಹಾಸನ-573201, ಸಂಚಾರಿ ದೂರವಾಣಿ: 9972293886, 9481593937, 8123237269, ಸ್ಥಿರ ದೂರವಾಣಿ: 08172-240055 ಯನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ಹೆಚ್ಚು ಪ್ರೀತಿಸುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಆಗುತ್ತದೆ

error: Content is protected !!
Scroll to Top