1000 ರೂಪಾಯಿಯ ನೋಕಿಯಾ ಮೊಬೈಲ್ ಬಿಡುಗಡೆ

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಜು.24. ರಿಲಾಯನ್ಸ್ ಒಡೆತನದ ಜಿಯೋ ತನ್ನ ವಿಶೇಷ ಆಫರ್ ಗಳ ಮೂಲಕ ಟೆಲಿಕಾಂ ಕ್ಷೇತ್ರವನ್ನು ಅಲ್ಲೋಲ ಕಲ್ಲೋಲಗೊಳಿಸಿರುವುದರ ಮಧ್ಯೆ ನೋಕಿಯಾ ಕಂಪೆನಿಯೂ ಸದ್ದುಮಾಡತೊಡಗಿದೆ.

ವಿವಿಧ ಕಂಪೆನಿಗಳ ನವೀನ ಮಾದರಿಯ ಮಾಡೆಲ್‌ಗಳು ಮಾರುಕಟ್ಟೆಯನ್ನು ಅಲಂಕರಿಸಿದ್ದರೂ ನೋಕಿಯಾ ಹೆಸರು ಮಾತ್ರ ಈಗಲೂ ಬಳಕೆದಾರರ ಮನದಲ್ಲಿ ಅಚ್ಚೊತ್ತಿ ನಿಂತಿದೆ. ಪ್ರಸ್ತುತ ನೋಕಿಯಾ ಎರಡು ಹೊಸ ಫೀಚರ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ನೋಕಿಯಾ 105 ಮತ್ತು ನೋಕಿಯಾ 130 ಆಗಿದೆ. ಈ ಎರಡೂ ಫೋನ್‌ಗಳು ಒಂದೇ ಸಿಮ್ ವೈಶಿಷ್ಟ್ಯತೆಯೊಂದಿಗೆ ಬಂದಿದ್ದು ನೋಕಿಯಾ 105 ಬೆಲೆ ರೂ $14.5 (ಅಂದಾಜು. ರೂ. 930) ಆಗಿದ್ದು ನೋಕಿಯಾ 130 ಬೆಲೆ ರೂ $21.5 (ಅಂದಾಜು. ರೂ. 1,380) ಆಗಿದೆ.

ನೋಕಿಯಾ 130 1.8 ಇಂಚಿನ ಕ್ಯುವಿಜಿಎ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು 8 ಎಮ್‌ಬಿ ಸಂಗ್ರಹಣೆಯನ್ನು ಇದು ಹೊಂದಿದೆ. ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ. ಫೋನ್ ರಿಯರ್ ಕ್ಯಾಮೆರಾವನ್ನು ಒಳಗೊಂಡಿದ್ದು ಬ್ಲೂಟೂತ್ ಕೂಡ ಇದರಲ್ಲಿದೆ. ಬ್ಯಾಟರಿ ಸಾಮರ್ಥ್ಯ 1020mAh ಆಗಿದ್ದು 11.5 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಇದನ್ನು 44.5 ಗಂಟೆಗಳವರೆಗೆ ವಿಸ್ತರಿಸಿದೆ. ಎಫ್‌ಎಮ್ ರೇಡಿಯೊವನ್ನು ಡಿವೈಸ್ ಹೊಂದಿದ್ದು, ಎಲ್‌ಇಡಿ ಫ್ಲ್ಯಾಶ್ ಲೈಟ್ ಅನ್ನು ಪೋನ್ ಮೇಲ್ಭಾಗದಲ್ಲಿ ಹೊಂದಿದೆ.

Also Read  ಕೌಟಂಬಿಕ, ದಾಂಪತ್ಯ ಸಮಸ್ಯೆಗೆ ಸುಲಭ ಪರಿಹಾರ ಮತ್ತು ದಿನ ಭವಿಷ್ಯ

ನೋಕಿಯಾ 105 ಪೋಲಿಕಾರ್ಬನೇಟ್ ವಿನ್ಯಾಸವನ್ನು ಪಡೆದುಕೊಂಡಿದ್ದು 1.8 ಇಂಚಿನ ಕ್ಯುವಿಜಿಎ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ನೋಕಿಯಾ ಸಿರೀಸ್ 30+ ಅನ್ನು ಆಧರಿಸಿದ್ದು ಸ್ನೇಕ್ ಕ್ಸೇಂಜಿಯಾ ಗೇಮ್ ಅನ್ನು ಇದು ಒಳಗೊಂಡಿದೆ. 4 ಎಮ್‌ಬಿ ಸಂಗ್ರಹಣೆಯನ್ನು ಡಿವೈಸ್ ಪಡೆದುಕೊಂಡಿದ್ದು 800 mah ಬ್ಯಾಟರಿ ಇದರಲ್ಲಿದೆ. 15 ಗಂಟೆಗಳ ಬ್ಯಾಟರಿ ಸೇವೆಯನ್ನು ಇದು ಒದಗಿಸಲಿದ್ದು 31 ದಿನಗಳ ಸ್ಟ್ಯಾಂಡ್‌ಬೈ ಸಮಯನ್ನು ನೀಡಲಿದೆ. ಎಫ್ಎಮ್ ರೇಡಿಯೊ, ಮೈಕ್ರೋ ಯುಎಸ್‌ಬಿ ಚಾರ್ಜರ್ ಮತ್ತು 3.5 ಎಮ್‌ಎಮ್ ಆಡಿಯೊ ಪೋರ್ಟ್ ಅನ್ನು ಡಿವೈಸ್ ಹೊಂದಿದೆ.

error: Content is protected !!
Scroll to Top