ಮಹಾಮಳೆಗೆ ಮುಳುಗಿದ ಉದನೆ ತೂಗು ಸೇತುವೆ ► ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರ ಪರದಾಟ

(ನ್ಯೂಸ್ ಕಡಬ) newskadaba.com ಕಡಬ, ಆ.09. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉದನೆ ತೂಗು ಸೇತುವೆಯು ಗುಂಡ್ಯ ಕೆಂಪುಹೊಳೆಯ ನೆರೆ ನೀರಿನಿಂದ ಆವೃತವಾಗಿದ್ದು, ಜನ ಸಂಚಾರ ಸ್ಥಗಿತಗೊಂಡಿದೆ.

ನೆರೆ ನೀರಿನ ಮಟ್ಟ ಏರಿಕೆಯಾಗಿದ್ದು, ಉದನೆ ಪೇಟೆಗೆ ನೀರು ನುಗ್ಗಿರುವುದರಿಂದ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ, ನೇಲ್ಯಡ್ಕ ಹಾಗೂ ಶಿರಾಡಿಯಲ್ಲಿ ನೆರೆ ನೀರು ರಸ್ತೆಗೆ ಬಂದುದರಿಂದ ಹೆದ್ದಾರಿ ತಡೆಯುಂಟಾಗಿದೆ. ತೂಗು ಸೇತುವೆ ಮುಳುಗಡೆಯಿಂದಾಗಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರು ಪರದಾಡುವಂತಾಗಿದೆ.

Scroll to Top