ಕಡಬ: ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಮದ್ರಸ ಸಮಸ್ತ ಕೇರಳ ಸುನ್ನಿ ಬಾಲ ವೇದಿ (ಎಸ್‍ಕೆಎಸ್‍ಬಿ.ವಿ) ಇದರ 2018-19ನೇ ಸಾಲಿನ ಅಧ್ಯಕ್ಷರಾಗಿ ಮಹಮ್ಮದ್ ಫಝಲ್ ಕಾರ್ಯದರ್ಶಿಯಾಗಿ ಮಹಮ್ಮದ್ ಸುಹೈಲ್ ಹಾಗೂ ಕೋಶಾಧಿಕಾರಿಯಾಗಿ ಮಹಮ್ಮದ್ ರಾಫಿ ಆಯ್ಕೆ ಆಗಿದ್ದಾರೆ.

ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಸೈಯ್ಯದ್ ಅನಸ್ ಹಾದಿ ತಂಙಳ್ ಅಲ್ ಅಝ್‍ಹರಿ ದುವಾಃದೊಂದಿಗೆ, ಮದ್ರಸದ ಸದರ್ ಮುಅಲ್ಲಿಂ ಮೂಸಾ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ, ರಫೀಕ್ ಮುಸ್ಲಿಯಾರ್, ಹಾರಿಸ್ ಗಂಡಿಬಾಗಿಲು ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಯಕ್ಷರಾಗಿ ಝಾಹಿದ್ , ಜೊತೆಕಾರ್ಯದರ್ಶಿಯಾಗಿ ಆಶಿಕ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಹಮ್ಮದ್ ರಾಶಿದ್, ಅನ್ವರ್ ಹುಸೈನ್, ಮುಈನುದ್ದೀನ್, ಆದಿಲ್, ಸಫ್ವಾನ್ ಆಯ್ಕೆ ಮಾಡಲಾಯಿತು.










