ಕಬಕ: ಮಾರುತಿ ಓಮ್ನಿ – ಆಟೋರಿಕ್ಷಾ ಢಿಕ್ಕಿ ► ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಜು.25. ಮಾರುತಿ ಒಮ್ನಿ ಮತ್ತು ಆಟೋರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಪುತ್ತೂರು ಸಮೀಪದ ಕಬಕದಲ್ಲಿ ಬುಧವಾರದಂದು ನಡೆದಿದೆ.

ಮೃತ ರಿಕ್ಷಾ ಚಾಲಕನನ್ನು ಸೇಡಿಯಾಪು ನಿವಾಸಿ ಪುರಂದರ ಎಂದು ಗುರುತಿಸಲಾಗಿದೆ. ಮಾಣಿ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದಾಗ ಕಬಕ ಸಮೀಪ ಮಾರುತಿ ಓಮ್ನಿ ನಡುವೆ ಢಿಕ್ಕಿ ಸಂಭವಿಸಿ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಪುರಂದರ ರವರ ಪುತ್ರ ಹಾಗೂ ಪ್ರಯಾಣಿಕರೋರ್ವರು ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Scroll to Top