
(ನ್ಯೂಸ್ ಕಡಬ) newskadaba.com, ನ.27 . ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಮಂಗಳೂರು ವಿಭಾಗದಲ್ಲಿ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗಿದೆ. ದರ ಏರಿಕೆಯ ಬಳಿಕ ಕೆಲವು ಮಾರ್ಗಗಳಲ್ಲಿ ಸರ್ಕಾರಿ ಬಸ್ ಪ್ರಯಾಣ ಖಾಸಗಿ ಬಸ್ಗಳಿಗಿಂತಲೂ ದುಬಾರಿಯಾಗಿದ್ದು, ಕನಿಷ್ಠ ಪ್ರಯಾಣ ದರ 15 ರೂ.ಗೆ ತಲುಪಿದೆ.
ದರ ಪರಿಷ್ಕರಣೆಯಿಂದ ನಿತ್ಯ ಬಸ್ಗಳಲ್ಲಿ ಸಂಚರಿಸುವ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಹೊರೆ ಬೀಳುತ್ತಿದೆ. ಸರ್ಕಾರಿ ಸಾರಿಗೆಯ ದರವೇ ಖಾಸಗಿ ಬಸ್ಗಳಿಗಿಂತ ಹೆಚ್ಚಾಗಿರುವುದು ಪ್ರಯಾಣಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.




