
(ನ್ಯೂಸ್ ಕಡಬ) newskadaba.com, ನ.27 . ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವದ ಲಕ್ಷ ದೀಪೋತ್ಸವ ದಿನವಾದ ಡಿ.8 ರಂದು ಕುಣಿತ ಭಜನೆ ತಂಡಗಳ ನೋಂದಣಿಗೆ ಅರ್ಜಿ ಅಹ್ನಾನಿಸಲಾಗಿದೆ.ಪಕ್ಷ ದೀಪೋತ್ಸವ ದಿನಸಂಜೆ 6.00 ರಿಂದ 9.00 ಗಂಟೆ ತನ ಕ ಭಜನಾ ಕಾರ್ಯಕ್ರಮ ನಡೆಯಲಿದ್ದು ತಂಡಗಳು ಸಾಯಂಕಾಲ 5.00ಕ್ಕೆ ತಯಾರಿರುವಂತೆ ಸೂಚಿಸಲಾಗಿದ್ದು ತಂಡದಲ್ಲಿ ಗರಿಷ್ಟ 12 ಮಂದಿ ಮಾತ್ರ ಇರತಕ್ಕದ್ದು. ಭಾಗವಹಿಸುವ ಭಜನಾ ತಂಡಗಳು ಹಿಂದೂ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿರುವುದು. ಭಜನಾ ತಂಡಗಳು ತಮ್ಮ ಸ್ವಂತ ವೆಚ್ಚದಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ.
ಭಾಗವಹಿಸುವ ತಂಡಗಳು ಡಿ.04 ಒಳಗಾಗಿ ಲಿಂಕ್ ಮೂಲಕ ಆನ್ ಲೈನ್ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದಾಗಿದ್ದು ಕೊನೆಯಲ್ಲಿ ಸಬ್ ಮಿಟ್ ನಂತರ ಬರುವ ರಿಜಿಸ್ಟ್ರೇಷನ್ ನಂಬರ್ ಸ್ಟ್ರೀನ್ ಶಾಟ್ ತೆಗೆದಿಟ್ಟುಕೊಳ್ಳಬೇಕೆಂದು ಸೂಚಿಸಲಾಗಿದೆ. ಒಂದು ಮೇಲ್ ಐ.ಡಿ ಯಿಂದ ಒಂದು ತಂಡದ ರಿಜಿಸ್ಟ್ರೇಷನ್ ಮಾತ್ರ ಮಾಡಬಹುದಾಗಿದ್ದು.
ಅಗತ್ಯ ಬಿದ್ದಲ್ಲಿ 9743193797 ನಂಬರ್ ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.




