
(ನ್ಯೂಸ್ ಕಡಬ) newskadaba.com, ನ .24 . ನಂದಿನಿ ಮೊಸರಿನ ದರವನ್ನು ಕನಿಷ್ಠ 2 ರೂ. ಇಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿ 20 ದಿನ ಕಳೆದರೂ, ಕೆಎಂಎಫ್ ಇನ್ನೂ ದರ ಕಡಿತಗೊಳಿಸಿಲ್ಲ.
ಹಾಲಿನ ದರ ಏರಿಕೆಯ ಜೊತೆಗೆ ಮೊಸರಿನ ದರವನ್ನೂ ಲೀಟರ್ಗೆ 14 ರೂ. ಹಾಗೂ ಅರ್ಧ ಲೀಟರ್ಗೆ 6 ರೂ. ಹೆಚ್ಚಿಸಲಾಗಿತ್ತು. ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಮೊಸರಿನ ದರ ಇಳಿಕೆಗೆ ಸಿಎಂ ಸೂಚನೆ ನೀಡಿದ್ದರು.
ಆದರೆ, ಜಿಲ್ಲಾ ಹಾಲು ಒಕ್ಕೂಟಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಒಮ್ಮತ ಮೂಡದ ಕಾರಣ ದರ ಇಳಿಕೆ ವಿಳಂಬವಾಗಿದೆ ಎಂದು ಕೆಎಂಎಫ್ ಆಡಳಿತಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.ಇದರಿಂದ ಸರ್ಕಾರದ ವಿಳಂಬ ಧೋರಣೆಗೆ ಗ್ರಾಹಕರ ಆಕ್ರೋಶ ವ್ಯಕ್ತವಾಗಿದೆ.




