
(ನ್ಯೂಸ್ ಕಡಬ) newskadaba.com, ಅ .30 . ರಾಜ್ಯದ ಜನತೆಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಹಾಲಿನ ದರ 8 ರೂ. ಹೆಚ್ಚಳಕ್ಕೆ ಅಕ್ಟೋಬರ್ 29 ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಈ ಎಂಟು ರೂಪಾಯಿ ಪೈಕಿ ರೈತರಿಗೆ 7 ರೂಪಾಯಿ ಮತ್ತು ಉಳಿದ 1 ರೂಪಾಯಿ ಒಕ್ಕೂಟಗಳಿಗೆ ಸಿಗಲಿದ್ದು, ನವೆಂಬರ್ 1 ರಿಂದ ಪರಿಸ್ಕೃತ ದರ ಜಾರಿಗೆ ಬರಲಿದೆ.
10 ರೂ. ಏರಿಸಬೇಕೆಂಬ ಬೇಡಿಕೆ ಇತ್ತು. ಒಕ್ಕೂಟಗಳ ಸ್ವಾಯತ್ತತೆ ಮೊಟಕು ಮಾಡಬಾರದು. ಆದರೂ ನಾವು 8 ರೂ.ಗೆ ಇಳಿಸಿ ನಿರ್ಧಾರ ಮಾಡಿದ್ದು, 7 ರೂ. ರೈತರಿಗೆ ನೀಡುತ್ತೇವೆ. ಇನ್ನುಳಿದ 1 ರೂ. ಒಕ್ಕೂಟಕ್ಕೆ ನೀಡುತ್ತೇವೆ. ಸರ್ವಾನುಮತದಿಂದ ನಾವು ನಿರ್ಧಾರ ಮಾಡಿದ್ದೇವೆ. ಇದರೊಂದಿಗೆ ಪ್ರತಿ ಲೀಟರ್ ಹಾಲಿಗೆ 35ರೂ. ರೈತರಿಗೆ ಸಿಗುತ್ತಿತ್ತು. ಈಗ ಸರ್ಕಾರದ 5 ರೂ. ಸಹಾಯಧನ ಸೇರಿ 42 ರೂ. ಸಿಗಲಿದೆ. ಬರಗಾಲದ ಮಧ್ಯೆ ರೈತರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.




