ಜಂತರ್ ಮಂತರ್‌ನಲ್ಲಿ ದಿಢೀರ್ ಪ್ರತಿಭಟನೆ: ಸಿಜೆಪಿ ನಾಯಕರು ದೆಹಲಿ ಪೊಲೀಸರ ವಶಕ್ಕೆ!

(ನ್ಯೂಸ್‌ ಕಡಬ) newskadaba.com, ಅ.13.  ಪೊಲೀಸರ ಬಿಗಿ ಭದ್ರತೆ ಹಾಗೂ ನಿರ್ಬಂಧಿತ ಬ್ಯಾರಿಕೇಡ್‌ಗಳನ್ನು ಲೆಕ್ಕಿಸದೆ ಜಂತರ್ ಮಂತರ್‌ನೊಳಗೆ ನುಸುಳಿದ ಸಿಜೆಪಿ ಸಹ-ಸಂಚಾಲಕ ಸೌರವ್ ದಾಸ್ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಬಿಗಿ ಭದ್ರತೆ ಹಾಗೂ ನಿರ್ಬಂಧಿತ ಬ್ಯಾರಿಕೇಡ್‌ಗಳನ್ನು ಲೆಕ್ಕಿಸದೆ ಜಂತರ್ ಮಂತರ್‌ನೊಳಗೆ ನುಸುಳಿದ ಸಿಜೆಪಿ ಸಹ-ಸಂಚಾಲಕ ಸೌರವ್ ದಾಸ್ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಗೃಹ ಸಚಿವಾಲಯವು ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ರದ್ದುಗೊಳಿಸಿ, ಸುತ್ತಮುತ್ತ ಸೆಕ್ಷನ್ 163 ಜಾರಿಗೊಳಿಸಿತ್ತು.

ರದ್ದುಗೊಳಿಸಿದ ಮರುದಿನವೇ, ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ನೇತೃತ್ವದಲ್ಲಿ ಕಾರ್ಯಕರ್ತರ ಗುಂಪೊಂದು ಮಂಗಳವಾರ ಮುಂಜಾನೆ ಸ್ಥಳಕ್ಕೆ ಆಗಮಿಸಿ ತ್ರಿವರ್ಣ ಧಜ್ವ ಹಾರಿಸಿ ದಿಢೀರ್ ಪ್ರತಿಭಟನೆ ನಡೆಸಿದೆ. ಸಿಜೆಪಿ ಕಾರ್ಯಕರ್ತರು ಜಂತರ್ ಮಂತರ್ ತಲುಪಿ ಪ್ರತಿಭಟಿಸಲು ಕಬ್ಬಿಣದ ಗೇಟ್ ಹಾಗೂ ಪೊಲೀಸ್ ಬ್ಯಾರಿಕೇಡ್‌ಗಳನ್ನು ಹತ್ತುವ ವಿಡಿಯೋವನ್ನು ಸಿಜೆಪಿ ಸಂಸ್ಥಾಪಕ ಅಭೀಜಿತ್ ದೀಪ್ಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರತಿಭಟನಾಕಾರರನ್ನು ನಂತರ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ದೀಪ್ಕೆ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆಯ ವಿಡಿಯೋದಲ್ಲಿ, ಸಿಜೆಪಿ ನಾಯಕರಾದ ರಾಂಕಾ ಮತ್ತು ದಾಸ್ ತಮ್ಮ ಕೈಯಲ್ಲಿ ಬಾವುಟಗಳನ್ನು ಹಿಡಿದು ಕಾರ್ಯಕರ್ತರೊಂದಿಗೆ ಗೇಟ್ ಹಾರಿ ಪ್ರತಿಭಟನಾ ಪ್ರದೇಶವನ್ನು ಪ್ರವೇಶಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆಯಲು ಯತ್ನಿಸಿದಾಗ, ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಪೊಲೀಸರೊಂದಿಗೆ ತಳ್ಳಾಟ ನಡೆಸಿದರು. ತದನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಸ್ಥಳದಿಂದ ಕರೆದೊಯ್ಯುತ್ತಿರುವುದು ಕಂಡುಬಂದಿದೆ.

Scroll to Top