ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ!

(ನ್ಯೂಸ್‌ ಕಡಬ) newskadaba.com, ಅ.09 . ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2027ರ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆ-1 ಮತ್ತು ಪರೀಕ್ಷೆ-2ರ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಅಕ್ಟೋಬರ್ 22ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1, 2027ರ ಮಾರ್ಚ್ 22 ರಿಂದ ಏಪ್ರಿಲ್ 5ರ ವರೆಗೆ ನಡೆಯಲಿದೆ (ಮಾ. 22: ಪ್ರಥಮ ಭಾಷೆ, ಮಾ. 25: ವಿಜ್ಞಾನ, ಮಾ. 27: ದ್ವಿತೀಯ ಭಾಷೆ, ಮಾ. 30: ಗಣಿತ, ಏ. 5: ಸಮಾಜವಿಜ್ಞಾನ).ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ಮೇ 24 ರಿಂದ ಮೇ 29ರ ವರೆಗೆ ನಡೆಯಲಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-1,  2027ರ ಫೆಬ್ರವರಿ 27 ರಿಂದ ಮಾರ್ಚ್ 17ರ ವರೆಗೆ ನಡೆಯಲಿದೆ (ಫೆ. 27: ಕನ್ನಡ, ಮಾ. 1: ಇಂಗ್ಲಿಷ್, ಮಾ. 4: ಭೌತಶಾಸ್ತ್ರ, ಮಾ. 8: ರಸಾಯನಶಾಸ್ತ್ರ, ಮಾ. 12: ಗಣಿತ).ದ್ವಿತೀಯ ಪಿಯುಸಿ ಪರೀಕ್ಷೆ-2: ಮೇ 3 ರಿಂದ ಮೇ 15ರ ವರೆಗೆ ನಡೆಯಲಿದೆ.

Scroll to Top