
(ನ್ಯೂಸ್ ಕಡಬ) newskadaba.com, ಸೆ. 25 . ವಿಮಾ ಸೇವೆಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ಗ್ರಾಹಕರ ಹಿತರಕ್ಷಣೆಗಾಗಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಏಜೆಂಟ್‌ಗಳು ಹಾಗೂ ವಿತರಕರಿಗೆ ನೀಡಲಾಗುವ ಕಮಿಷನ್‌ಗೆ ಗರಿಷ್ಠ ಮಿತಿ ನಿಗದಿಪಡಿಸಲು ಸೆಪ್ಟೆಂಬರ್ 23ರಂದು ಬಿಡುಗಡೆ ಮಾಡಿದ ಸಮಾಲೋಚನಾ ಪತ್ರದಲ್ಲಿ ಪ್ರಸ್ತಾಪಿಸಿದೆ.
ಮೊದಲ ವರ್ಷದ ಕಮಿಷನ್ ಅನ್ನು ಪ್ರೀಮಿಯಂ ಪಾವತಿ ಅವಧಿಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ. 5 ವರ್ಷಕ್ಕಿಂತ ಕಡಿಮೆ ಅವಧಿ ಯಲ್ಲಿ ವಿತರಣಾ ಸಂಸ್ಥೆಗಳಿಗೆ ಶೇ. 5, ಏಜೆಂಟ್‌ಗಳಿಗೆ ಶೇ. 6.25.9ವರ್ಷದ ಅವಧಿ ಯಲ್ಲಿ ವಿತರಣಾ ಸಂಸ್ಥೆಗಳಿಗೆ ಶೇ. 18, ಏಜೆಂಟ್‌ಗಳಿಗೆ ಶೇ. 22.5 ಹಾಗೂ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಿತರಣಾ ಸಂಸ್ಥೆಗಳಿಗೆ ಶೇ. 20, ಏಜೆಂಟ್‌ಗಳಿಗೆ ಶೇ. 25 .ಪಾಲಿಸಿ ದಾಖಲೆಗಳಲ್ಲಿ ಏಜೆಂಟ್‌ಗಳ ಕಮಿಷನ್ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು.
ಗ್ರಾಹಕರಿಗೆ ಅನಗತ್ಯ ಅಥವಾ ತಪ್ಪು ವಿಮೆ ಮಾರಾಟ ಮಾಡುವುದನ್ನು ನಿಯಂತ್ರಿಸುವುದು ಇದರ ಮುಖ್ಯ ಉದ್ದೇಶ.ಹೊಸ ವಾಹನಗಳಿಗೆ ಡಿಜಿಟಲ್ ಮೂಲಕ ವಿಮೆ ಖರೀದಿಸಲು ಉತ್ತೇಜನ ಹಾಗೂ ಮೋಟಾರ್ ಥರ್ಡ್-ಪಾರ್ಟಿ ವಿಮೆ ಕಮಿಷನ್‌ಗೆ ಪ್ರತ್ಯೇಕ ಮಿತಿ.




