
(ನ್ಯೂಸ್ ಕಡಬ) newskadaba.com, ಸೆ. 25 . ಭಾರತದತ್ತ ಪ್ರಯಾಣಿಸುತ್ತಿದ್ದ ‘ಎಂವಿ ಕೇಪ್ ಡಾವೊ’ (MV Cape Dao) ವಾಣಿಜ್ಯ ಹಡಗಿನ ಮೇಲೆ ಓಮನ್‌ನ ತೀರದ ಬಳಿ ಕ್ಷಿಪಣಿ/ಟಾರ್ಪಿಡೋ ದಾಳಿ ನಡೆದಿದೆ.
ಹಡಗಿನಲ್ಲಿದ್ದ 19 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಓರ್ವ ನಾವಿಕ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ದಿಯೋರಿಯಾ ಮೂಲದ ವೈಪರ್ ‘ಸೂರಜ್ ಯಾದವ್’ ಘಟನೆಯಲ್ಲಿ ಮೃತಪಟ್ಟ ದುರ್ದೈವಿ.
ಈ ಭೀಕರ ದಾಳಿಯನ್ನು ಭಾರತದ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದ್ದು, ಓಮನ್ ತಟರಕ್ಷಕ ಪಡೆ ಹಾಗೂ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು ರಕ್ಷಿಸಲ್ಪಟ್ಟ ನಾವಿಕರನ್ನು ಭಾರತಕ್ಕೆ ಕರೆತರಲು ಕ್ರಮ ವಹಿಸುತ್ತಿದೆ.




