ಆಂಟಿಬಯೋಟಿಕ್, ಪೇನ್‌ಕಿಲ್ಲರ್ ತಪ್ಪು ಬಳಕೆಗೆ ಕಡಿವಾಣ: ಕೇಂದ್ರ ಔಷಧ ನಿಯಂತ್ರಣ ಇಲಾಖೆಯಿಂದ ಹೊಸ ಕಟ್ಟುನಿಟ್ಟಿನ ನಿಯಮ!

(ನ್ಯೂಸ್‌ ಕಡಬ) newskadaba.com, ಸೆ. 23 . ದೇಶದಲ್ಲಿ ನಕಲಿ ಔಷಧಿಗಳ ಮಾರಾಟ ತಡೆಯಲು ಹಾಗೂ ನೋವು ನಿವಾರಕ ಮತ್ತು ಆಂಟಿಬಯೋಟಿಕ್‌ಗಳ ತಪ್ಪು ಬಳಕೆಗೆ ಕಡಿವಾಣ ಹಾಕಲು ಕೇಂದ್ರ ಔಷಧ ನಿಯಂತ್ರಣ ಇಲಾಖೆಯು ಮಹತ್ವದ ನಿಯಮಗಳನ್ನು ಜಾರಿಗೆ ತಂದಿದೆ.

ಫಾರ್ಮಾಸಿಸ್ಟ್‌ಗಳಿಗೆ ವೈದ್ಯರ ಚೀಟಿ ಇಲ್ಲದೆ ಮಾತ್ರೆ ಮಾರಾಟ ಮಾಡುವಂತಿಲ್ಲ.ಜನರಿಗೆ ಸ್ವಯಂ ಚಿಕಿತ್ಸೆಗೆ ಆಂಟಿಬಯೋಟಿಕ್/ಪೇನ್‌ಕಿಲ್ಲರ್ ತೆಗೆದುಕೊಳ್ಳಲು ಪ್ರೋತ್ಸಾಹಿಸಬಾರದು.ಆಸ್ಪತ್ರೆಗಳಿಗೆ ಆಂಟಿಬಯೋಟಿಕ್ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಮತ್ತು ರೋಗಿಗಳಿಗೆ ಸರಿಯಾದ ಕೌನ್ಸೆಲಿಂಗ್ ನೀಡಬೇಕು.

ವೈದ್ಯರಿಗೆ ಅಗತ್ಯವಿದ್ದರೆ ಮಾತ್ರ ಕಡಿಮೆ ಡೋಸ್‌ ಹಾಗೂ ಕಡಿಮೆ ದಿನಗಳಿಗೆ ಔಷಧಿ ಬರೆಯಬೇಕು.ಕಿಡ್ನಿ, ಹೃದಯ ಕಾಯಿಲೆ ಮತ್ತು ನಿರ್ಜಲೀಕರಣ ಸಮಸ್ಯೆ ಇರುವವರಿಗೆ ಪೇನ್‌ಕಿಲ್ಲರ್ ನೀಡುವಾಗ ಹೆಚ್ಚಿನ ಎಚ್ಚರ ವಹಿಸಬೇಕು.ಲ್ಯಾಬ್ ವರದಿ ನೋಡಿ ಸೋಂಕಿನ ತೀವ್ರತೆಗೆ ತಕ್ಕಂತೆ ಸೂಕ್ತ ಆಂಟಿಬಯೋಟಿಕ್ ಆಯ್ಕೆ ಮಾಡಬೇಕು.

Scroll to Top