ಕಟಪಾಡಿ: ಬಾವಿಗೆ ಬಿದ್ದಿದ್ದ ನವಿಲನ್ನು ರಕ್ಷಿಸಿದ ಉಡುಪಿ ಅಗ್ನಿಶಾಮಕ ಸಿಬ್ಬಂದಿ

(ನ್ಯೂಸ್‌ ಕಡಬ) newskadaba.com,   ಸೆ .15. ಕಟಪಾಡಿ ಕೋಟೆ ಪ್ರದೇಶದಲ್ಲಿ ಬಾವಿಗೆ ಬಿದ್ದಿದ್ದ ನವಿಲೊಂದನ್ನು ಉಡುಪಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸೋಮವಾರ ಸಂಜೆ ಸುರಕ್ಷಿತವಾಗಿ ರಕ್ಷಿಸಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು.

ಸಿಬ್ಬಂದಿ ಮಹಾಬಲೇಶ್ವರ ಅವರು ಬಾವಿಗಿಳಿದು ನವಿಲಿಗೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಮೇಲಕ್ಕೆ ತಂದರು.ಅಶ್ವಿನ್ ಸುನಿಲ್, ಮಹಾಬಲೇಶ್ವರ, ನಾಗೇಶ್ ಪೂಜಾರಿ, ಸುಧೀರ್, ಅಮರ್ ಹಾಗೂ ಗಣೇಶ್ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಸಮಯೋಚಿತ ಸ್ಪಂದನೆ ಹಾಗೂ ಧೈರ್ಯದ ಕೆಲಸಕ್ಕೆ ಉಡುಪಿ ಅಗ್ನಿಶಾಮಕ ಸಿಬ್ಬಂದಿಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Scroll to Top