ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಬಿಗ್ ನ್ಯೂಸ್: ಕಾಲೇಜು ಶಿಕ್ಷಣ ಇಲಾಖೆಯಿಂದ ಉಚಿತ ಆನ್‌ಲೈನ್ ತರಬೇತಿ!

(ನ್ಯೂಸ್‌ ಕಡಬ) newskadaba.com,  ಸೆ .08 . ಕಾಲೇಜು ಶಿಕ್ಷಣ ಇಲಾಖೆಯಿಂದ 90,000 ಅಭ್ಯರ್ಥಿಗಳಿಗೆ ₹9 ಕೋಟಿ ವೆಚ್ಚದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ತರಬೇತಿ.ಸಹಾಯಕ ಪ್ರಾಧ್ಯಾಪಕ, FDA, PDO, ‘ಗ್ರೂಪ್-ಸಿ’, PSI, ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು.

ಕರ್ನಾಟಕದ ನಿವಾಸಿಗಳಿಗೆ ಅವಕಾಶ. ಅಭ್ಯರ್ಥಿಗಳು ಏಕಕಾಲಕ್ಕೆ ಗರಿಷ್ಠ 3 ಪರೀಕ್ಷೆಗಳಿಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಆ್ಯಪ್ ಹಾಗೂ ಪೋರ್ಟಲ್ ಮೂಲಕ 360 ಸಂವಾದಾತ್ಮಕ ಆನ್‌ಲೈನ್ ತರಗತಿಗಳು (ಪ್ರತಿ ಅವಧಿ 90-120 ನಿಮಿಷ).

ರೆಕಾರ್ಡೆಡ್ ತರಗತಿಗಳು, ಸ್ಟಡಿ ಮೆಟೀರಿಯಲ್, MCQs, ಮಾದರಿ ಪರೀಕ್ಷೆಗಳು ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಬ್ಯಾಂಕ್ ಲಭ್ಯ.ಸಾಮಾನ್ಯ ಅಧ್ಯಯನ (ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ರಾಜಕೀಯ), ವಿಜ್ಞಾನ & ತಂತ್ರಜ್ಞಾನ, CSAT, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಪ್ರಚಲಿತ ವಿದ್ಯಮಾನಗಳು ಹಾಗೂ ಕಂಪ್ಯೂಟರ್ ಜ್ಞಾನ.

Scroll to Top