(ನ್ಯೂಸ್ ಕಡಬ) newskadaba.com ಸೆ. 02. ಬಿರಿಯನಿ ತಿಂದು ಬಂದಿದ್ದಕ್ಕೆ ಶಿಕ್ಷೆಗೊಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಪ್ರಥಮ ಪಿಯುಸಿಯ ವಿದ್ಯಾರ್ಥಿನಿ ಶಾಲೆ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಾರಿಗೂ ತಿಳಿಸದೇ ಬಿರಿಯಾನಿ ತಿಂದು ಬಂದಿದ್ದಕ್ಕೆ ಫರಿದಾಬಾದ್‌ನ ಘಾಜಿಪುರ ರಸ್ತೆಯ ನವೋದಯ ವಿದ್ಯಾ ನಿಕೇತನ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರು ಆಕೆಗೆ ಶಿಕ್ಷೆ ನೀಡಿದ್ದರಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಫರಿದಾಬಾದ್‌ನ ನವೋದಯ ವಿದ್ಯಾ ನಿಕೇತನ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮಂಗಳವಾರ 4 ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಿಕೆ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.ಬಿರಿಯಾನಿ ವಿಚಾರದಲ್ಲಿ ಆಕೆಯ ಸಹಪಾಠಿಗಳ ನಡುವೆ ಜಗಳ ನಡೆದಿದ್ದು, ಇದರಲ್ಲಿ ವಿದ್ಯಾರ್ಥಿನಿ ಭಾಗಿಯಾಗಿರಲಿಲ್ಲ. ಆದರೂ ಅವಳಿಗೆ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಆಕೆ ಅವಮಾನ ಎಂದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತ್ತು ಎಂದು ವಿದ್ಯಾರ್ಥಿನಿಯ ತಂದೆ ಪಾಲಿ ಗ್ರಾಮದ ನಿವಾಸಿ ಪ್ರಮೋದ್ ಕುಮಾರ್ ದೂರಿದ್ದಾರೆ.
ಶಾಲೆಯ ಪ್ರಾಂಶುಪಾಲರಾದ ಆರ್.ಕೆ. ಶರ್ಮಾ ಅವರು ಈ ಆರೋಪವನ್ನು ನಿರಾಕರಿಸಿದ್ದು, ವಿದ್ಯಾರ್ಥಿನಿಗೆ ಶಿಕ್ಷೆ ನೀಡಿಲ್ಲ. ಅವಳು ಸ್ನಾನಗೃಹಕ್ಕೆ ಹೋಗಬೇಕು ಎಂದು ಹೇಳಿ ತರಗತಿಯಿಂದ ಹೊರಬಂದವಳು ಶಾಲೆಯ ಮೂರನೇ ಮಹಡಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.ಘಟನೆಯ ಕುರಿತು ಪ್ರತಿಕ್ರಿಯಿಸಿರುವ ದಬುವಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಸುಮೇರ್ ಸಿಂಗ್, ವಿದ್ಯಾರ್ಥಿನಿ ಆತ್ಮಹತ್ಯೆಯ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.








