(ನ್ಯೂಸ್ ಕಡಬ) newskadaba.com, ಸೆ.01: ನಿಗಮ-ಮಂಡಳಿಗಳಲ್ಲಿ 2.5 ವರ್ಷ ಪೂರೈಸಿರುವ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಕಚೇರಿ ಸೂಚಿಸಿದೆ. ರಾಜೀನಾಮೆ ನೀಡದಿದ್ದರೆ ಈ ವಾರದ ಬಳಿಕ ಹಿಂದಿನ ನೇಮಕಾತಿಗಳು ಸ್ವಯಂಚಾಲಿತವಾಗಿ ರದ್ದಾಗಲಿವೆ.
ಮುಂದಿನ ವಾರದಿಂದ 70ಕ್ಕೂ ಅಧಿಕ ನಿಗಮ-ಮಂಡಳಿಗಳಿಗೆ ನೂತನ ಅಧ್ಯಕ್ಷ ಮತ್ತು ನಿರ್ದೇಶಕರ ನೇಮಕ ಪ್ರಕ್ರಿಯೆ ಆರಂಭವಾಗಲಿದೆ..ತೆರವಾಗುವ ಸಂಸ್ಥೆಗಳ ಪೈಕಿ 20 ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಸಚಿವ ಸ್ಥಾನ ವಂಚಿತ ಶಾಸಕರಿಗೆ ನೀಡಲು ಯೋಜಿಸಲಾಗಿದ್ದು, ದೆಹಲಿ ವರಿಷ್ಠರಿಂದ ಕರಡು ಪಟ್ಟಿಗೆ ಅಂಗೀಕಾರ ದೊರೆತಿದೆ.
ಮುಂಬರುವ ಸ್ಥಳೀಯ ಸಂಸ್ಥೆಗಳ (ನಗರ ಹಾಗೂ ಗ್ರಾಮೀಣ) ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಪಕ್ಷದ ಪರ ಶ್ರಮಿಸಿದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಉಳಿದ ಅವಧಿಗೆ ಅಧಿಕಾರ ಹಂಚಿಕೆ ಮಾಡಲು ಸರ್ಕಾರ ಮುಂದಾಗಿದೆ.








