(ನ್ಯೂಸ್ ಕಡಬ) newskadaba.com, ಜು.31 ಕಡಬ: ಸರಕಾರಿ ಪದವಿಪೂರ್ವ ಕಾಲೇಜು, ಕಡಬದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಪಿ. ಅವರನ್ನು ಆಯ್ಕೆ ಮಾಡಲಾಗಿದೆ.
ಅಶೋಕ್ ಕುಮಾರ್ ಪಿ. ಅವರು ರಾಮ್ ಭಟ್ ಅವರ ಪುತ್ರರಾಗಿದ್ದು, ಕಡಬದ ವಿದ್ಯಾ ನಗರ ನಿವಾಸಿಯಾಗಿದ್ದಾರೆ.
ಅದೇ ರೀತಿ, ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಸದಸ್ಯರಾಗಿ ಕಾರ್ತಿಕ್ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

ಕಾರ್ತಿಕ್ ಗೌಡ ಅವರು ಸಾಂತಪ್ಪ ಗೌಡ ಅವರ ಪುತ್ರರಾಗಿದ್ದು, ಪಿಜಕ್ಕಳ, ಕಡಬ ನಿವಾಸಿಯಾಗಿದ್ದಾರೆ.
ಈ ಆಯ್ಕೆ ಕುರಿತು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಸರಕಾರಿ ಪದವಿಪೂರ್ವ ಕಾಲೇಜು, ಕಡಬದ ಪ್ರಾಂಶುಪಾಲರಿಗೆ ಜು. 29ರಂದು ಪತ್ರದ ಮೂಲಕ ತಿಳಿಸಿದ್ದಾರೆ.








