ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರಿ ಏರಿಕೆ

(ನ್ಯೂಸ್‌ ಕಡಬ) newskadaba.com,  ಜು.22:  ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ  ದರ ಬ್ಯಾರಲ್‌ಗೆ $92.09 (ಸುಮಾರು ₹8,800) ತಲುಪಿದ್ದು, ಜೂನ್ ಬಳಿಕ ಅತ್ಯಧಿಕ ಮಟ್ಟ ದಾಖಲಿಸಿದೆ.ಅಮೆರಿಕದ ಡಬ್ಲ್ಯೂಟಿಐ ಕಚ್ಚಾ ತೈಲ ದರವೂ %1.1 ರಷ್ಟು ಏರಿಕೆಯಾಗಿ ಬ್ಯಾರಲ್‌ಗೆ $85.23 ಕ್ಕೆ ತಲುಪಿದೆ.

ಜಗತ್ತಿನ ಶೇ. 20 ರಷ್ಟು ತೈಲ ಸಾಗಣೆಯಾಗುವ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದ್ದು ಮತ್ತು ಉಭಯ ದೇಶಗಳ ನಡುವೆ ನಡೆದ ಸರಣಿ ದಾಳಿಗಳು ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟುಮಾಡುವ ಭೀತಿ ಮೂಡಿಸಿದೆ.

ತೈಲ ದರ ಏರಿಕೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಸರಕು ಸಾಗಣೆ ವೆಚ್ಚ ಹೆಚ್ಚಾಗಲಿದ್ದು, ಹಣದುಬ್ಬರ ಏರಿಕೆಯಾಗುವ ಆತಂಕ ಎದುರಾಗಿದೆ. ಭಾರತದಂತಹ ಪ್ರಮುಖ ಆಮದುದಾರ ದೇಶಗಳಲ್ಲಿ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ಇದು ನೇರ ಪ್ರಭಾವ ಬೀರುವ ಸಾಧ್ಯತೆಯಿದೆ.

Scroll to Top