ವಾಟ್ಸಪ್‌ನಲ್ಲಿ ಬಂತು ನಕಲಿ ಮದುವೆ ಆಹ್ವಾನ ಪತ್ರಿಕೆ: ₹9.96 ಲಕ್ಷ ಕಳೆದುಕೊಂಡ ಸರ್ಕಾರಿ ಅಧಿಕಾರಿ!



(ನ್ಯೂಸ್‌ ಕಡಬ) newskadaba.com,  ಜು.22:  ವಾಟ್ಸಪ್‌ನಲ್ಲಿ ಬಂದ ನಕಲಿ ಮದುವೆ ಆಹ್ವಾನ ಪತ್ರಿಕೆಯ ಫೈಲ್ ತೆರೆದ ಸರ್ಕಾರಿ ಅಧಿಕಾರಿಯೊಬ್ಬರು ₹9.96 ಲಕ್ಷ ಕಳೆದುಕೊಂಡಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿ ರಮೇಶ್ ಬಾಬು.







ಜುಲೈ 14ರಂದು ಅಪರಿಚಿತ ಸಂಖ್ಯೆಯಿಂದ ಬಂದಿದ್ದ ಮದುವೆ ಆಹ್ವಾನದ .APK ಫೈಲ್ ಅನ್ನು ತೆರೆದ ಕೆಲವೇ ನಿಮಿಷಗಳಲ್ಲಿ, ಅವರ ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ ಹಣ ಕಡಿತವಾಗಿದೆ.ಸಂತ್ರಸ್ತರು ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.






ವಾಟ್ಸಪ್ ಅಥವಾ ಟೆಲಿಗ್ರಾಮ್‌ನಲ್ಲಿ ಅಪರಿಚಿತ ಮೂಲಗಳಿಂದ ಬರುವ .APK ಫೈಲ್‌ಗಳು ಅಥವಾ ಅನುಮಾನಾಸ್ಪದ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಅಥವಾ ಓಪನ್ ಮಾಡಬೇಡಿ. ಆ್ಯಪ್‌ಗಳನ್ನು ಯಾವಾಗಲೂ ಅಧಿಕೃತ Google Play Store ನಿಂದ ಮಾತ್ರ ಡೌನ್‌ಲೋಡ್ ಮಾಡಿ.

error: Content is protected !!
Scroll to Top