ಬಸ್ ಗೆ ಹತ್ತಲೆಂದು ಓಡಿ ಬಂದ ವೇಳೆ ಬಸ್ ಢಿಕ್ಕಿ – ವ್ಯಕ್ತಿ ಮೃತ್ಯು!!



(ನ್ಯೂಸ್ ಕಡಬ) newskadaba.com ಸುಳ್ಯ, ಜು. 12. ಬಸ್ಗೆ ಹತ್ತಲೆಂದು ಓಡಿ ಬಂದ ಆಯತಪ್ಪಿ ಬಸ್ ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಸುಳ್ಯದ ಏನೆಕಲ್ ಎಂಬಲ್ಲಿ ನಡೆದಿದೆ.







 

ಮೃತರನ್ನು ಏನೆಕಲ್ಲು ಗ್ರಾಮದ ಮುತ್ತಾಜೆಯ ಚೆನ್ನಪ್ಪ ಗೌಡ ಎಂದು ಗುರುತಿಸಲಾಗಿದೆ. ಪಂಜಕ್ಕೆ ಹೋಗಲೆಂದು ಏನೆಕಲ್ ಬಸ್ ಸ್ಟ್ಯಾಂಡ್ ಎದುರುಗಡೆ ರಸ್ತೆ ಬದಿಯಲ್ಲಿ ನಿಂತಿದ್ದ ಇವರು, ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಹೋಗುವ ಬಸ್ ಗೆ ಹತ್ತಲು ಬಸ್ ಸ್ಟ್ಯಾಂಡ್ ಕಡೆಗೆ ಓಡಿದಾಗ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.






ಡಿಕ್ಕಿಯ ರಭಸಕ್ಕೆ ಚೆನ್ನಪ್ಪರವರು ರಸ್ತೆಯ ಮಧ್ಯದಲ್ಲೇ ಬಿದ್ದು ಹೊರಳಾಡಿದ್ದಾರೆ. ಕೂಡಲೇ ಅಲ್ಲಿ ಸೇರಿದ್ದವರು ಹೆಚ್ಚಿನ ಚಿಕಿತ್ಸೆಗೆಂದು ಕಡಬ ಆಸ್ಪತ್ರೆಗೆ ಕರೆದೊಯ್ಯವ ವೇಳೆಗೆ ಅವರು ಮೃತಪಟ್ಟರೆಂದು ತಿಳಿದುಬಂದಿದೆ.

error: Content is protected !!
Scroll to Top