ಎಸ್.ಸಿ ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯ ತರಬೇತಿ



(ನ್ಯೂಸ್ ಕಡಬ) newskadaba.com ಮಂಗಳೂರು, ಜು. 04. ಪಿ.ಎಂ.ಎ.ಜೆ.ಎ.ವೈ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ  ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೊಕೆಮಿಕಲ್ಸ್ ಎಂಜಿನಿಯರಿಂಗ್  ಆ್ಯಂಡ್ ಟೆಕ್ನಾಲಜಿ  (ಸಿ.ಐ.ಪಿ.ಇ.ಟಿ) ಮೈಸೂರು ಸಂಸ್ಥೆಯಲ್ಲಿ “ಸಹಾಯಕ ಮೆಷಿನ್ ಆಪರೇಟರ್ – ಪ್ಲಾಸ್ಟಿಕ್ಸ್ ಪ್ರೊಸೆಸಿಂಗ್” ಮತ್ತು ಸಹಾಯಕ ಮೆಷಿನ್ ಆಪರೇಟರ್ – ಇಂಜೆಕ್ಷನ್ ಮೌಲ್ದಿಂಗ್” ವಿಷಯಗಳಲ್ಲಿ  3 ತಿಂಗಳ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಜುಲೈ 6 ರಿಂದ ಆಯೋಜಿಸಲಾಗಿದೆ. ಈ ತರಬೇತಿಗೆ ಉಚಿತ ಆಹಾರ ಹಾಗೂ ವಸತಿ ಸೌಲಭ್ಯ ಒದಗಿಸಲಾಗುತ್ತದೆ.







 

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ, ಯಾವುದೇ ಪದವಿ ಪಡೆದ 18 ರಿಂದ  35 ವರ್ಷದೊಳಗಿನ ಭಾಗವಹಿಸಬಹುದು. ಈ ತರಬೇತಿಗೆ ದಾಖಲಾದ ಪ್ರತಿಯೊಬ್ಬ ವಿದ್ಯಾರ್ಥಿಗೂ ಕ್ಯಾಂಪಸ್ ನೇಮಕಾತಿಯ ಮೂಲಕ ಉದ್ಯೋಗಾವಕಾಶದ ಖಚಿತತೆ ನೀಡಲಾಗುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನ ರೂಪಿಸಿಕೊಳ್ಳಲು ಇದು ಯುವಜನರಿಗೆ ಅತ್ಯುತ್ತಮ ಅವಕಾಶವಾಗಿದೆ.
ಹೆಚ್ಚಿನ ಮಾಹಿತಿಗೆ ಮೈಸೂರು ಹೆಬ್ಬಾಳ ಕೈಗಾರಿಕಾ ಪ್ರದೇಶದ ಸಿ.ಐ.ಪಿ.ಇ.ಟಿ (ದೂರವಾಣಿ: 9483431968/ 9739196375 ಅಥವಾ ವೆಬ್‍ಸೈಟ್ www.cipet.gov.in.) ಸಂಪರ್ಕಿಸಬಹುದು ಎಂದು ಸಿ.ಐ.ಪಿ.ಇ.ಟಿ ಸಂಸ್ಥೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






error: Content is protected !!
Scroll to Top