ಸಿನಿಮಾ ಪೈರಸಿಗೆ ಬ್ರೇಕ್: ಟೆಲಿಗ್ರಾಂಗೆ ಕೇಂದ್ರ ಸರ್ಕಾರದಿಂದ ಅಧಿಕೃತ ನೋಟಿಸ್!

(ನ್ಯೂಸ್‌ ಕಡಬ) newskadaba.com,  ಜು.04 : ಚಲನಚಿತ್ರಗಳು ಮತ್ತು ಒಟಿಟಿ ವೆಬ್ ಸರಣಿಗಳ ಅನಧಿಕೃತ ಪೈರಸಿ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರಮುಖ ಡಿಜಿಟಲ್ ಮೆಸೇಜಿಂಗ್ ವೇದಿಕೆಯಾದ ಟೆಲಿಗ್ರಾಂಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ.

ಟೆಲಿಗ್ರಾಂನ ವಿವಿಧ ಚಾನೆಲ್‌ಗಳು ಹಾಗೂ ಗ್ರೂಪ್‌ಗಳಲ್ಲಿ ಹೊಸ ಸಿನಿಮಾಗಳು ಮತ್ತು ಆಡಿಯೋ-ವಿಷುಯಲ್ ಕಂಟೆಂಟ್‌ಗಳನ್ನು ಕಾನೂನುಬಾಹಿರವಾಗಿ ಹಂಚಿಕೊಳ್ಳಲಾಗುತ್ತಿದೆ ಎಂಬ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪೈರಸಿ ನಿಯಂತ್ರಿಸಲು ಟೆಲಿಗ್ರಾಂ ಇದುವರೆಗೆ ಕೈಗೊಂಡಿರುವ ಕ್ರಮಗಳು ಮತ್ತು ಭವಿಷ್ಯದಲ್ಲಿ ಇಂತಹ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ರೂಪಿಸಲಿರುವ ತಾಂತ್ರಿಕ ವ್ಯವಸ್ಥೆಯ ಕುರಿತು 15 ದಿನಗಳ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

Scroll to Top