(ನ್ಯೂಸ್ ಕಡಬ) newskadaba.com ಜೂ. 30. ಪುತ್ತೂರು ತಾಲೂಕಿನ ಪೆರ್ನಾಜೆ ಶ್ರೀ ಸೀತಾ ರಾಘವ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಶೂನ್ಯ ದಾಖಲಾತಿ ಇರುವ ಕಾರಣದಿಂದ ಹಾಗೂ ಅನುದಾನ ಸಂಹಿತೆ ನಿಯಮದಂತೆ ಒಂದು ಬಾರಿಗೆ ಮಾತ್ರ ದಾಖಲಾತಿ ಮನ್ನಾ ಮಾಡಲು ಅವಕಾಶವಿದೆ.
ಶಾಲೆಯಲ್ಲಿ ಹಿಂದಿನ ಎರಡು ಶೈಕ್ಷಣಿಕ ವರ್ಷಗಳಲ್ಲಿ ನಿಗದಿತ ದಾಖಲಾತಿ-ಹಾಜರಾತಿ ಇಲ್ಲದ ಪ್ರಯುಕ್ತ ಶಾಲೆಯ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ ಅನ್ವಯ ಷರತ್ತುಗಳಪಡಿಸಿ, ರದ್ದುಪಡಿಸಲಾಗಿದೆ.
ಪ್ರಸ್ತುತ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿಲ್ಲ. ಇದನ್ನು ಮೀರಿ ಪೋಷಕರು ಈ ಶಾಲೆಯಲ್ಲಿ ಮಕ್ಕಳನ್ನು ದಾಖಲಾತಿ ಮಾಡಿದ್ದಲ್ಲಿ ಶಾಲಾ ಶಿಕ್ಷಣ ಇಲಾಖೆ ಜವಾಬ್ದಾರರಲ್ಲವೆಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









