(ನ್ಯೂಸ್ ಕಡಬ) newskadaba.com, ಜೂ.17: ಆಸ್ಪತ್ರೆಯ ಬಿಲ್ ಪಾವತಿಸಲು ಡೆಬಿಟ್ ಕಾರ್ಡ್ ಬಳಸಿದ್ದ ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಯಿಂದ ಖದೀಮರು ಜೂನ್ 5 ರಿಂದ 8ರ ನಡುವಿನ ಅವಧಿಯಲ್ಲಿ ₹2.12 ಲಕ್ಷ ಹಣವನ್ನು ವಂಚನೆಯಿಂದ ಲೂಟಿ ಮಾಡಿದ್ದಾರೆ.
ಸಂತ್ರಸ್ತರು ಜೂನ್ 3ರಂದು ಆಸ್ಪತ್ರೆಯ ಬಿಲ್ ಪಾವತಿಗೆ ಡೆಬಿಟ್ ಕಾರ್ಡ್ ಬಳಸಿದ ಬಳಿಕ ಯಾವುದೇ ವ್ಯವಹಾರ ನಡೆಸಿರಲಿಲ್ಲ.ಜೂನ್ 8ರಂದು ಹಣ ಕಡಿತವಾಗಿರುವ ಎಸ್‌ಎಂಎಸ್ ಬಂದಾಗ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 66(D) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.









