ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ಕಿರೀಟ ಗೆದ್ದ ಮಂಗಳೂರು ಮೂಲದ ಉದ್ಯಮಿ ಯಶೋಧಾ ರಾಜೇಶ್



(ನ್ಯೂಸ್‌ ಕಡಬ) newskadaba.com,  ಜೂ.17: ಥೈಲ್ಯಾಂಡ್‌ನ ಹುವಾ ಹಿನ್‌ನಲ್ಲಿ ನಡೆದ ಜಾಗತಿಕ ಸ್ಪರ್ಧೆಯಲ್ಲಿ 22 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ವಿನ್ನರ್ 2026″ ಪ್ರಶಸ್ತಿ ಗೆದ್ದ ಮಂಗಳೂರಿನ ಯಶೋಧಾ ರಾಜೇಶ್.







ಪ್ರತಿಭಾ ಸುತ್ತಿನಲ್ಲಿ ಅವರು ಪ್ರದರ್ಶಿಸಿದ ಭಾರತೀಯ ಸಂಸ್ಕೃತಿ ಬಿಂಬಿಸುವ ಅರ್ಧನಾರೀಶ್ವರ” ನೃತ್ಯ ರೂಪಕ ಮತ್ತು ಕರ್ನಾಟಕದ ಶಿಲಾಬಾಲಿಕೆಯರಿಂದ ಪ್ರೇರಿತವಾದ ವೇಷಭೂಷಣ ಜಾಗತಿಕ ಗಮನ ಸೆಳೆಯಿತು.ಏಳು ದಿನಗಳ ಈ ಕಾರ್ಯಕ್ರಮದಲ್ಲಿ ಸೌಂದರ್ಯದ ಜೊತೆಗೆ ವಿಶೇಷ ಮಕ್ಕಳ ಆಶ್ರಮಕ್ಕೆ ಭೇಟಿ ಹಾಗೂ ಸಮುದ್ರ ಪರಿಸರ ಜಾಗೃತಿ ಮೂಡಿಸುವ ಸಮಾಜಮುಖಿ ಕಾರ್ಯಗಳಲ್ಲೂ ಭಾಗಿ.






‘ಮಿಸೆಸ್ ಇಂಡಿಯಾ ಆಸ್ಟ್ರಲ್ 2025’ ರನ್ನರ್-ಅಪ್ ಆಗಿದ್ದ ಇವರನ್ನು ರಾಷ್ಟ್ರೀಯ ನಿರ್ದೇಶಕಿ ಪ್ರತಿಭಾ ಸೌನಶಿಮಠ ಅಂತರರಾಷ್ಟ್ರೀಯ ವೇದಿಕೆಗೆ ಆಯ್ಕೆ ಮಾಡಿದ್ದರು. ಒಬ್ಬರೇ ಮಗಳನ್ನು ಬೆಳೆಸುತ್ತಾ, ಉದ್ಯಮದ ಜೊತೆಗೆ ಈ ಸಾಧನೆ ಮಾಡಿರುವ ಯಶೋಧಾ ಅವರ ದೃಢಸಂಕಲ್ಪ ಮಹಿಳೆಯರಿಗೆ ಮಾದರಿಯಾಗಿದೆ.

error: Content is protected !!
Scroll to Top