ಮಕ್ಕಳಲ್ಲಿ ಹೆಚ್ಚಿದ ಶಿಗೆಲ್ಲಾ ಸೋಂಕು ರಾಜ್ಯಾದ್ಯಂತ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ

(ನ್ಯೂಸ್‌ ಕಡಬ) newskadaba.com,   ಜೂ. 12  ಬೆಂಗಳೂರು: ಕೇರಳದಲ್ಲಿ ಅತ್ಯಂತ ಸಾಂಕ್ರಾಮಿಕ ಹಾಗೂ ಮಾರಣಾಂತಿಕ ಶಿಗೆಲ್ಲೋಸಿಸ್ ಬ್ಯಾಕ್ಟೀರಿಯಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಕೋಝಿಕ್ಕೋಡ್‌ನಲ್ಲಿ 4 ವರ್ಷದ ಬಾಲಕಿ ಈ ಸೋಂಕಿಗೆ ಬಲಿಯಾಗಿದ್ದು, ವಯನಾಡು ಸೇರಿದಂತೆ ವಿವಿಧ ಜಿಲ್ಲೆಗಳ 300ಕ್ಕೂ ಹೆಚ್ಚು ಶಾಲಾ ಮಕ್ಕಳಲ್ಲಿ ಇದರ ಲಕ್ಷಣಗಳು ಪತ್ತೆಯಾಗಿವೆ.

ಶಿಗೆಲ್ಲಾ ಎಂಬುದು ವೈರಸ್ ಅಲ್ಲ, ಇದೊಂದು ಕರುಳಿನ ಆರೋಗ್ಯದ ಮೇಲೆ ತೀವ್ರವಾಗಿ ದಾಳಿ ಮಾಡುವ ಬ್ಯಾಕ್ಟೀರಿಯಾ ಆಗಿದೆ.ಕಲುಷಿತ ನೀರು, ಕಲುಷಿತ ಆಹಾರ ಸೇವನೆ ಮತ್ತು ಅನೈರ್ಮಲ್ಯದಿಂದಾಗಿ ಇದು ಒಬ್ಬರಿಂದ ಮತ್ತೊಬ್ಬರಿಗೆ ವೇಗವಾಗಿ ಹರಡುತ್ತದೆ.

ರೋಗನಿರೋಧಕ ಶಕ್ತಿ ಕಡಿಮೆ ಇರುವ 5 ವರ್ಷದೊಳಗಿನ ಮಕ್ಕಳಲ್ಲಿ ಈ ಸೋಂಕು ಬೇಗನೆ ಕಾಣಿಸಿಕೊಳ್ಳಲಿದ್ದು, ನಿರ್ಲಕ್ಷ್ಯ ವಹಿಸಿದರೆ ಜೀವಕ್ಕೆ ಕಂಟಕವಾಗಬಹುದು ಎಂದು ಕೆಸಿಜಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಲಕ್ಷ್ಮೀಪತಿ ಎಚ್ಚರಿಸಿದ್ದಾರೆ.

Scroll to Top