ಖ್ಯಾತ ಶೂಟರ್ ಹಾಗೂ ಒಲಿಂಪಿಕ್ ಕೋಚ್ ಜಸ್ಪಾಲ್ ರಾಣಾ ದೆಹಲಿಯಲ್ಲಿ ನಿಧನ!



(ನ್ಯೂಸ್‌ ಕಡಬ) newskadaba.com,   ಜೂ. 12 :1990ರ ದಶಕದಲ್ಲಿ ಭಾರತೀಯ ಶೂಟಿಂಗ್ ಕ್ಷೇತ್ರಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದ ಖ್ಯಾತ ಶೂಟರ್ ಹಾಗೂ ಹೈ-ಪರ್ಫಾರ್ಮೆನ್ಸ್ ಕೋಚ್ ಜಸ್ಪಾಲ್ ರಾಣಾ (49) ಅವರು ಗುರುವಾರ ರಾತ್ರಿ ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.







 

ಇತ್ತೀಚೆಗೆ ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ (ISSF) ವಿಶ್ವಕಪ್ ಮುಗಿಸಿ ಭಾರತಕ್ಕೆ ಮರಳುವ ವೇಳೆ ಅವರು ತೀವ್ರ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ ..






ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ದೇಶಕ್ಕೆ ಹತ್ತಾರು ಪದಕಗಳನ್ನು ತಂದುಕೊಟ್ಟಿದ್ದ ರಾಣಾ, ನಿವೃತ್ತಿಯ ಬಳಿಕ ಯಶಸ್ವಿ ತರಬೇತುದಾರರಾಗಿ ಗುರುತಿಸಿಕೊಂಡಿದ್ದರು. ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಸೇರಿದಂತೆ ದೇಶದ ಹಲವು ಪ್ರಮುಖ ಪಿಸ್ತೂಲ್ ಶೂಟರ್‌ಗಳನ್ನು ವಿಶ್ವಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. …

error: Content is protected !!
Scroll to Top