ಮಂಜೇಶ್ವರದಲ್ಲಿ ರೈಲು ಡಿಕ್ಕಿ: ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಕಾರ್ಮಿಕರ ದುರ್ಮರಣ

(ನ್ಯೂಸ್‌ ಕಡಬ) newskadaba.com,  ಜೂ.10   ಮಂಜೇಶ್ವರ ರೈಲ್ವೆ ನಿಲ್ದಾಣದ ಸಮೀಪ ಮಂಗಳವಾರ ರಾತ್ರಿ ಎರಡು ಪ್ರತ್ಯೇಕ ರೈಲು ಅಪಘಾತಗಳು ಸಂಭವಿಸಿವೆ.

ಉಮೇಶ್ (39): ಮೊಗ್ರಾಲ್ ಪುತ್ತೂರು ಮೂಲದ ಇವರು ಸಂಜೆ 7 ಗಂಟೆಗೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಗೂಡ್ಸ್ ರೈಲು ಢಿಕ್ಕಿಯಾಗಿ ಮೃತಪಟ್ಟಿದ್ದಾರೆ.ಮನೀಶ್ (19): ಕೀರ್ತೇಶ್ವರದ ಫ್ಯಾಬ್ರಿಕೇಶನ್ ಕಾರ್ಮಿಕ. ರಾತ್ರಿ 9 ಗಂಟೆ ಸುಮಾರಿಗೆ ಹಳಿ ದಾಟುವಾಗ ರೈಲು ಢಿಕ್ಕಿಯಾಗಿ ಸಾನ್ನಿಧ್ಯ ಕಳೆದುಕೊಂಡಿದ್ದಾರೆ.

ಮೃತದೇಹಗಳನ್ನು ಮಂಗಲ್ಪಾಡಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಮೃತರ ದೇಹಗಳನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಮಂಜೇಶ್ವರ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಘಟನೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.

Scroll to Top