ಮತ್ಸ್ಯಸಂಪದ ಯೋಜನೆ: ಮೀನುಗಾರರಿಂದ ಅರ್ಜಿ ಆಹ್ವಾನ



(ನ್ಯೂಸ್ ಕಡಬ) newskadaba.com ಜೂ. 10. ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ – ಶೈತ್ಯಾಗಾರ / ಮಂಜುಗಡ್ಡೆ ಸ್ಥಾವರಗಳ ಆಧುನೀಕರಣ (MODERNIZATION OF COLD STORAGE / ICE PLANT) ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರಿಂದ ಸಾಮಾನ್ಯ ವರ್ಗದಡಿ ಅರ್ಜಿ ಅಹ್ವಾನಿಸಲಾಗಿದೆ.
ಅರ್ಹ ಫಲಾನುಭವಿಗಳು ಜೂನ್ 13 ರೊಳಗೆ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ
ನಗರದ ಉರ್ವಾಸ್ಟೋರ್ ದ.ಕ. ಜಿಲ್ಲಾ ಪಂಚಾಯತ್ ಆವರಣದ ರೆಕಾರ್ಡ್ ಬಿಲ್ಡಿಂಗ್ ಮೊದಲನೇ ಮಹಡಿಯಲ್ಲಿರುವ ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







error: Content is protected !!
Scroll to Top