ನಾಳೆ (ಜೂ. 06) ಸಿಇಟಿ ಫಲಿತಾಂಶ ಪ್ರಕಟ

(ನ್ಯೂಸ್ ಕಡಬ) newskadaba.com ಜೂ. 05. ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್‍ ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ಫಲಿತಾಂಶವನ್ನು ನಾಳೆ (ಜೂ.06) ಮಧ್ಯಾಹ್ನ 2 ಗಂಟೆಯ ನಂತರ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರದಂದು ಪ್ರಕಟಣೆ ಹೊರಡಿಸಿರುವ ಅವರು, ಎ.23 ಮತ್ತು ಎ.24ರಂದು ರಾಜ್ಯದ 745 ಪರೀಕ್ಷಾ ಕೇಂದ್ರಗಳಲ್ಲಿ ನಢೆದ ಸಿಇಟಿ ಪರೀಕ್ಷೆಗೆ 1,44,380 ಹುಡುಗರು, 1,86,099 ಹುಡುಗಿಯರು ಮತ್ತು 970 ವಿಶೇಷಚೇತನರು ಸೇರಿ ಒಟ್ಟು 3,30,479 ಅಭ್ಯರ್ಥಿಗಳು ಪರೀಕ್ಷೆಗೆ ಪರೀಕ್ಷೆಗೆ ಹಾಜರಾಗಿದ್ದರು ಎಂದಿದ್ದಾರೆ.

ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು https://keaonline.karnataka.gov.in/ugcet_2026_results/, https://keaonline.karnataka.gov.in/ugcet_2026_result/ ಅಥವಾ https://cetonline.karnataka.gov.in/kea/ ಲಿಂಕ್‍ಗಳ ಮೂಲಕ ಫಲಿತಾಂಶ ಪಡೆಯಬಹುದು ಎಂದು ಅವರು ವಿವರಿಸಿದ್ದಾರೆ.

Scroll to Top