(ನ್ಯೂಸ್ ಕಡಬ) newskadaba.com, ಜೂ.04: ತೈಲ ಬೆಲೆಗಳು ಭಾರಿ ಏರಿಕೆಯಾಗಿವೆ. ಇದರಿಂದ ಡಾಲರ್ ಮೌಲ್ಯವೂ ಬಲಗೊಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗಳ ಈ ಬೆಳವಣಿಗೆಗಳು ಚಿನ್ನ ಬೆಳ್ಳಿ ಬೆಲೆ ಮೇಲೆ ಒತ್ತಡ ಸೃಷ್ಟಿಸಿದ್ದು ಬೆಲೆ ಇಳಿಕೆಗೆ ಕಾರಣವಾಗಿದೆ.
ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಜೂನ್ 4 2026 ಗುರುವಾರದಂದು, 24 ಕ್ಯಾರೆಟ್ 10 ಗ್ರಾಂ ಬೆಲೆ 1,56,110 ರೂಪಾಯಿ ದಾಖಲಾಗಿದೆ. 1 ಗ್ರಾಂ ಬೆಲೆ, 15,611 ರೂ ದಾಖಲಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆಯಾಗಿದೆ. 1 ಗ್ರಾಂ ಬೆಲೆ 14,310 ರೂ ಆಗಿದ್ದು 10 ಗ್ರಾಂ ಬೆಲೆ 143100 ರೂಪಾಯಿಗೆ ತಲುಪಿದೆ.
ಬೆಳ್ಳಿ ಬೆಲೆ ಇಳಿಕೆ
ಬೆಳ್ಳಿ ಬೆಲೆ ಇಂದು ತಟಸ್ಥವಾಗಿದೆ ಗ್ರಾಂ ಬೆಲೆ 280 ರೂ ಆಗಿದ್ದು,, 2,80,000 ರೂ ದಾಖಲಾಗಿದೆ. ಬೆಳ್ಳಿ ಬೆಲೆ ಕಳೆದ 3 ದಿನಗಳಿಂದಲೂ ತಟಸ್ಥವಾಗುಳಿದಿದೆ.
ಬೆಲೆ ಏರಿಳಿತಕ್ಕೆ ಕಾರಣಗಳು
ಅಮೆರಿಕ- ಇರಾನ್ ಮಾತುಕತೆಗಳ ಬಗ್ಗೆ ಹೂಡಿಕೆದಾರರು ಗಮನವಿಟ್ಟುಕೊಂಡು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ದಾರೆ. ಅಲ್ಲದೆ ಇದೀಗ ಲೆಬನಾನ್- ಹಾಗೂ ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಇದು ಬಹಳಷ್ಟು ಬದಲಾವಣೆಗೆ ಕಾರಣವಾಗಲಿದೆ. ಅಮೆರಿಕದ ಜೊತೆಗೆ ಮಾತುಕತೆಗಳು ಅಂತಿಮವಾಗದ ಹಿನ್ನೆಲೆ ಚಿನ್ನದ ದರಗಳು ಇಳಿಕೆಯಾಗುತ್ತಲೇ ಸಾಗಿದೆ. ಕಳೆದ ಮೇ 30 ರಿಂದಲೂ ಚಿನ್ನದ ಬೆಲೆ ಒತ್ತಡದಲ್ಲಿದೆ, ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಮಾರಾಟದಲ್ಲಿ ತೊಡಗಿದ್ದಾರೆ, ಕಳೆದ 10 ದಿನಗಳಲ್ಲಿ ಮೇ 29 ರಂದು ಹೊರತುಪಡಿಸಿ, ಉಳಿದೆಲ್ಲಾ ದಿನಗಳಲ್ಲಿ ಚಿನ್ನ ಬೆಲೆ ಇಳಿಕೆಯಾಗುತ್ತಾ ಬಂದಿದೆ. ಸದ್ಯ ಇಸ್ರೇಲ್ -ಲೆಬನಾನ್ ನಡುವೆ ಕದನ ವಿರಾಮ ಘೋಷಣೆಯಾಗಿರುವುದರಿಂದ ಮತ್ತೆ ಬೆಲೆ ಹೆಚ್ಚಳ ಆಗುವ ಸಾಧ್ಯತೆಯೂ ಹೆಚ್ಚಾಗಿದೆ.









