(ನ್ಯೂಸ್ ಕಡಬ) newskadaba.com ಗೋವಾ, ಮೇ.19. ಕರ್ನಾಟಕ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ಕೊಟ್ಟಿರುವ ಹಿನ್ನಲೆಯಲ್ಲಿ ಇದೀಗ ಪಕ್ಕದ ರಾಜ್ಯ ಗೋವಾದಲ್ಲಿ ಬಹುಮತ ಹೊಂದಿರುವ ಕಾಂಗ್ರೇಸ್ ಶಾಸಕರು ಸರ್ಕಾರ ರಚಿಸಲು ಮುಂದಾಗಿದ್ದಾರೆ. ತಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕಾಗಿ ಕಾಂಗ್ರೇಸ್ ಶಾಸಕರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಗೋವಾದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 40 ಸ್ಥಾನಗಳ ಪೈಕಿ ಕಾಂಗ್ರೆಸ್ 16 ಶಾಸಕರನ್ನು ಹೊಂದಿದ್ದು, ಬಿಜೆಪಿ 14 ಶಾಸಕರನ್ನು ಹೊಂದಿತ್ತು. ರಾಜ್ಯಪಾಲರು ಬಿಜೆಪಿಗೆ, ಗೋವಾ ಫಾರ್‌ವರ್ಡ್, ಪಕ್ಷೇತರ ಶಾಸಕರು ಹಾಗೂ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದ್ದರು. ಕರ್ನಾಟಕ ರಾಜ್ಯಪಾಲರು ಸಮ್ಮಿಶ್ರಕ್ಕೆ ಸಹಮತ ನೀಡದೆ, ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ಕೊಟ್ಟ ಹಿನ್ನಲೆಯಲ್ಲಿ ಗೋವಾ ಕಾಂಗ್ರೇಸ್ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ತಮಗೆ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.