ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರ



(ನ್ಯೂಸ್‌ ಕಡಬ) newskadaba.comಮೇ.08: ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಬಸ್ ಅಪಘಾತಕ್ಕೀಡಾದ ಘಟನೆ ಮಡಿಕೇರಿ ಸಮೀಪದ ತಾಳತ್ ಮನೆ ಬಳಿ ನಡೆದಿದೆ. ಬೆಂಗಳೂರಿನಿಂದ ಹೊರಟ ಖಾಸಗಿ ಬಸ್ ಮಡಿಕೇರಿ ಸಮೀಪದ ತಲುಪುತ್ತಿದ್ದಂತೆ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪರಿಣಾಮ ಬಸ್ ರಸ್ತೆ ಪಕ್ಕಕ್ಕೆ ಇಳಿದು ವಾಲಿಕೊಂಡು ನಿಂತಿದೆ. ಅದೃಷ್ಠವಶಾತ್ ಅನಾಹುತ ಸಂಭವಿಸಿಲ್ಲ.







ಚಾಲಕನ ಸ್ಥಿತಿ ಗಂಭೀರ






ಚಾಲಕನಿಗೆ ತೀವ್ರ ಹೃದಯಘಾತ ಸಂಭವಿಸಿದೆ. ಆದರೆ ಬಸ್ ರಸ್ತೆಯ ಬದಿಗೆ ಇಳಿದ ಚಾಲಕ ಹಲವರ ಪ್ರಾಣ ಕಾಪಾಡಿದ್ದಾನೆ. ಇತ್ತ ಚಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತಕ್ಷಣವೇ ಚಾಲಕನನ್ನು ಮಡಿಕೇರಿ ಬಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!
Scroll to Top