ಮೂಡಬಿದಿರೆ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ► ಓರ್ವ ಮೃತ್ಯು



(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಮೇ.17. ಮಾರುತಿ ಸೆಲೆರಿಯೋ ಹಾಗೂ ಮಾರುತಿ 800 ಕಾರುಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟ ಘಟನೆ ಗುರುವಾರದಂದು ಮಿಜಾರಿನಲ್ಲಿ ನಡೆದಿದೆ. ಮೈಟ್ ಕಾಲೇಜು ಬಳಿ ನಡೆದಿದೆ.







ಮೃತ ವ್ಯಕ್ತಿಯನ್ನು ಮಾರುತಿ 800 ಕಾರಿನ ಚಾಲಕ, ಮೂಡು ಪೆರಾರ ನಿವಾಸಿ ಶಿವಾನಂದ ಶೆಟ್ಟಿ (65) ಎಂದು ಗುರುತಿಸಲಾಗಿದೆ. ಇವರು ತನ್ನ ಕಾರಿನಲ್ಲಿ ಮೂಡುಬಿದಿರೆಯತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಮಿಜಾರು ಎಂಐಟಿ ಕಾಲೇಜು ಬಳಿ ವಿರುದ್ಧ ದಿಕ್ಕಿನಿಂದ ಬಂದ ಮಾರುತಿ ಸೆಲೆರಿಯೋ ಕಾರು ಚಾಲಕನ ನಿಯಂತ್ರಣ ತಪ್ಪಿ ಇವರಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಶಿವಾನಂದ ಶೆಟ್ಟಿಯವರನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟರು ಎಂದು ತಿಳಿದುಬಂದಿದೆ.






ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

error: Content is protected !!
Scroll to Top