ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕೋದು ಹೇಗೆ? ಲಾಸ್ಟ್ ಡೇಟ್, ಫೀಸ್-‌ ಡೀಟೆಲ್ಸ್

(ನ್ಯೂಸ್‌ ಕಡಬ) newskadaba.com,  ಎ.23  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದ ನಂತರ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳ ಬಗ್ಗೆ ಅತೃಪ್ತಿ ಅಥವಾ ಸಂದೇಹವಿದ್ದಲ್ಲಿ, ಅವುಗಳನ್ನು ಸರಿಪಡಿಸಿಕೊಳ್ಳಲು ಅವಕಾಶವನ್ನು ನೀಡಿದೆ. ಇದಕ್ಕಾಗಿ ಮಂಡಳಿಯು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಮರುಎಣಿಕೆ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಗಳಿಗಾಗಿ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಪೂರ್ಣ ವರದಿ ಇಲ್ಲಿದೆ.

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮುನ್ನ ಇವು ಕಡ್ಡಾಯ:

  1. A) ಮೌಲ್ಯಮಾಪಕರಿಗೆ ಪತ್ರ ಬರೆಯುವುದು
  2. B) ಸ್ಕ್ಯಾನ್ ಪ್ರತಿಯನ್ನು ಪಡೆಯುವುದು
  3. C) ಮರುಎಣಿಕೆಗೆ ಸಲ್ಲಿಸುವುದು
  4. D) ದಂಡ ಶುಲ್ಕ ಪಾವತಿಸುವುದು

ವಿದ್ಯಾರ್ಥಿಗಳು ತಾವು ಬರೆದ ಉತ್ತರಗಳಿಗೆ ಮೌಲ್ಯಮಾಪಕರು ಎಷ್ಟು ಅಂಕಗಳನ್ನು ನೀಡಿದ್ದಾರೆ ಮತ್ತು ಯಾವುದೇ ಉತ್ತರ ಮೌಲ್ಯ ಮಾಪನವಾಗದೆ ಉಳಿದಿದೆಯೇ ಎಂದು ತಿಳಿಯಲು ಸ್ಕ್ಯಾನ್ ಪ್ರತಿಯನ್ನು ಪಡೆಯಬಹುದು.

ಸಾಮಾನ್ಯ ಅರ್ಜಿ ಅವಧಿ: ಏಪ್ರಿಲ್ 23, 2026 ರಿಂದ ಏಪ್ರಿಲ್ 26, 2026 ರವರೆಗೆ.

ದಂಡ ಶುಲ್ಕದೊಂದಿಗೆ ಅವಧಿ: ಏಪ್ರಿಲ್ 27 ರಿಂದ ಏಪ್ರಿಲ್ 28 ರವರೆಗೆ (ಪ್ರತಿ ದಿನಕ್ಕೆ ₹100 ದಂಡ ಇರುತ್ತದೆ).

ಶುಲ್ಕ: ಕರ್ನಾಟಕ-ಒನ್ ಅಥವಾ ಆನ್‌ಲೈನ್ ಮೂಲಕ ಪ್ರತಿ ವಿಷಯಕ್ಕೆ ₹410 ನಿಗದಿಪಡಿಸಲಾಗಿದೆ. ಆಫ್‌ಲೈನ್ ಕೇಂದ್ರಗಳಲ್ಲಿ ಸೇವಾ ಶುಲ್ಕ ಸೇರಿ ಇದು ₹420 ಆಗಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಈಗಾಗಲೇ Kseab ವೆಬ್​ಸೈಟ್​ನಲ್ಲಿ ಲಿಂಕ್​ ನೀಡಲಾಗಿದೆ. ಅಲ್ಲದೇ ನೋಂದಾಯಿತ ಮೊಬೈಲ್​ ಸಂಖ್ಯೆ ವ್ಯಾಟ್ಸಾಪ್​ ಸಂಖ್ಯೆಗೂ ಮೆಸೇಜ್‌ ಕಳುಹಿಸಲಾಗಿದೆ. ಇದಲ್ಲೇ ಕರ್ನಾಟಕ ಒನ್​ ಹಾಗೂ ಬೆಂಗಳೂರು ಒನ್​ /ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಮರುಎಣಿಕೆ ಮತ್ತು ಮರುಮೌಲ್ಯಮಾಪನ

ಸ್ಕ್ಯಾನ್ ಪ್ರತಿಯನ್ನು ಪಡೆದು ಪರಿಶೀಲಿಸಿದ ನಂತರ, ವಿದ್ಯಾರ್ಥಿಗೆ ತನ್ನ ಅಂಕಗಳು ಹೆಚ್ಚಾಗುವ ಭರವಸೆ ಇದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು

ಶುಲ್ಕ ಪಾವತಿ ವಿಧಾನ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಡಳಿಯು ವಿವಿಧ ಪಾವತಿ ಆಯ್ಕೆಗಳನ್ನು ನೀಡಿದೆ. ಈ ಕುರಿತು ಮಾಹಿತಿ ಕೆಳಗೆ ನೀಡಲಾಗಿದೆ.

ಆನ್‌ಲೈನ್: ಕರ್ನಾಟಕ-ಒನ್ ಪೋರ್ಟಲ್ ಮೂಲಕ ಸುಲಭವಾಗಿ ಪಾವತಿಸಬಹುದು. ಇಲ್ಲಿ ಪ್ರತಿ ವಿಷಯಕ್ಕೆ ₹410 (ಸ್ಕ್ಯಾನ್ ಪ್ರತಿ) ಮತ್ತು ₹810 (ಮರುಮೌಲ್ಯಮಾಪನ) ಇರುತ್ತದೆ.

ಬೆಂಗಳೂರು-ಒನ್ / ಕರ್ನಾಟಕ-ಒನ್ ಕೇಂದ್ರಗಳು: ನೇರವಾಗಿ ಕೇಂದ್ರಕ್ಕೆ ಭೇಟಿ ನೀಡಿ ಹಣ ಪಾವತಿಸಬಹುದು. ಇಲ್ಲಿ ಹೆಚ್ಚುವರಿ ಸೇವಾ ಶುಲ್ಕದೊಂದಿಗೆ ಕ್ರಮವಾಗಿ ₹420 ಮತ್ತು ₹820 ಪಾವತಿಸಬೇಕಾಗುತ್ತದೆ.

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮುನ್ನ ಸ್ಕ್ಯಾನ್ ಪ್ರತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ನಿಗದಿತ ದಿನಾಂಕದ ನಂತರ ಬರುವ ಯಾವುದೇ ಅರ್ಜಿಗಳನ್ನು ಮಂಡಳಿಯು ಪುರಸ್ಕರಿಸುವುದಿಲ್ಲ. ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಮತ್ತು ವಿಷಯದ ಕೋಡ್ ಅನ್ನು ಸರಿಯಾಗಿ ನಮೂದಿಸಬೇಕು.

 

ಅರ್ಜಿ ಸಲ್ಲಿಸಲು ಅವಧಿಏಪ್ರಿಲ್ 28, 2026 ರಿಂದ ಮೇ 4, 2026 ರವರೆಗೆ.

ಪಾವತಿ ಅವಧಿಆಫ್‌ಲೈನ್ ಮೂಲಕ ಹಣ ಪಾವತಿಸಲು ಮೇ 5 ಕೊನೆಯ ದಿನವಾಗಿರುತ್ತದೆ.

ಶುಲ್ಕ; ಪ್ರತಿ ವಿಷಯಕ್ಕೆ ಮರುಮೌಲ್ಯಮಾಪನದ ಶುಲ್ಕ ₹810 ರಿಂದ ₹820 ವರೆಗೆ ಇರುತ್ತದೆ.

Scroll to Top