ಪೆಟ್ರೋಲ್ ಬೆಲೆ ಏರಿಕೆ ವದಂತಿಯನ್ನ ತಳ್ಳಿ ಹಾಕಿದ ಸರ್ಕಾರ



(ನ್ಯೂಸ್‌ ಕಡಬ) newskadaba.com,  ಎ.23   ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಲಿವೆ ಎಂದು ಹೇಳಲಾಗುತ್ತಿತ್ತು. ಇದೀಗ ಈ ವದಂತಿಯನ್ನ ತಳ್ಳಿ ಹಾಕಿರುವ ಸರ್ಕಾರ, ಪೆಟ್ರೋಲ್ ಬೆಲೆ ಏರಿಕೆಯ ಯಾವ ಸಾಧ್ಯತೆಯೂ ಇಲ್ಲ ಎಂದು ತಿಳಿಸಿದೆ.





ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಟ್ವೀಟ್ ಮಾಡಿದ್ದು, “ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ಮಾಡಬಹುದು ಎಂದು ಕೆಲ ವರದಿಗಳು ಹೇಳಿವೆ. ಇಂಥ ಯಾವುದೇ ಪ್ರಸ್ತಾವವು ಸರ್ಕಾರದ ಪರಿಗಣನೆಯಲ್ಲಿ ಇಲ್ಲ. ಜನರಿಗೆ ಭಯ ಮತ್ತು ಆತಂಕ ಹುಟ್ಟಿಸಲು ಈ ವರದಿಗಳನ್ನು ಸೃಷ್ಟಿಸಲಾಗಿದೆ” ಎಂದು ಸ್ಪಷ್ಟನೆ ನೀಡಿದೆ.






“ಕಳೆದ 5 ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಏರಿಸದೇ ಇರುವ ಏಕೈಕ ದೇಶ ಭಾರತ. ಅಂತಾರಾಷ್ಟ್ರೀಯ ದರಗಳು ಗಣನೀಯವಾಗಿ ಏರಿಕೆಯಾದರೂ ಭಾರತೀಯ ನಾಗರಿಕರಿಗೆ ಅದರ ಬಿಸಿ ತಾಗದಂತೆ ಭಾರತ ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿವೆ” ಎಂದು ಪೆಟ್ರೋಲಿಯಂ ಸಚಿವಾಲಯವು ತಿಳಿಸಿದೆ.

ಚುನಾವಣೆಗಳ ಬಳಿಕ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳಲ್ಲಿ ಲೀಟರ್‌ಗೆ 25-28 ರೂನಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆದರೆ ಇದೀಗ ಇಂಧನ ಬೆಲೆ ಏರಿಕೆ ಸಾಧ್ಯತೆಯನ್ನು ಸರ್ಕಾರ ತಳ್ಳಿಹಾಕಿದೆ.

error: Content is protected !!
Scroll to Top