ವಿಶ್ವ ಮಟ್ಟದಲ್ಲಿ ಸದ್ದು ಮಾಡ್ತಿದೆ ‘ಸೆಪ್ಟೆಂಬರ್ 21’: ಪ್ರತಿಷ್ಠಿತ ಕೇನ್ಸ್‌ಗೆ ಅಧಿಕೃತ ಆಯ್ಕೆ



(ನ್ಯೂಸ್‌ ಕಡಬ) newskadaba.com,  ಎ.20 : ಇದು ಹೆಮ್ಮೆಯ ವಿಷಯ! 22 ವರ್ಷದ ಕಿರಿಯ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರ ನಿರ್ದೇಶನದ ಚೊಚ್ಚಲ ಚಿತ್ರ ಸೆಪ್ಟೆಂಬರ್ 21′, 2026ರ ಮೇ ತಿಂಗಳಿನಲ್ಲಿ ನಡೆಯಲಿರುವ 79ನೇ ಕೇನ್ಸ್ ಚಲನಚಿತ್ರೋತ್ಸವದ ‘ಮಾರ್ಚೆ ಡು ಫಿಲ್ಮ್’ ವಿಭಾಗದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ.







  • ವಿಶ್ವ ಪ್ರಥಮ ಪ್ರದರ್ಶನ: ಮೇ 16 ರಂದು ಸಂಜೆ 5:45 ಕ್ಕೆ ಕೇನ್ಸ್‌ನ ಪಲೈಸ್ ಥಿಯೇಟರ್‌ನಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ.
  • ಕಥಾವಸ್ತು: ಈ ಚಿತ್ರವು ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವವರ ಮತ್ತು ಅವರ ಆರೈಕೆ ಮಾಡುವ ಕುಟುಂಬದ ಸದಸ್ಯರ ಭಾವನಾತ್ಮಕ ಜಗತ್ತನ್ನು ಅನಾವರಣಗೊಳಿಸುತ್ತದೆ.
  • ತಾರಾಗಣ: ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಪ್ರವೀಣ್ ಸಿಂಗ್ ಸಿಸೋಡಿಯಾ, ಜರೀನಾ ವಹಾಬ್, ಅಜಿತ್ ಶಿಧಾಯೆ ಮತ್ತು ಅಮಿತ್ ಬೆಹ್ಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
  • ನಿರ್ಮಾಣ: ವಿಸಿಕಾ ಫಿಲ್ಮ್ಸ್, ಎಫ್‌ಎಂಡಿ ಪ್ರೊಡಕ್ಷನ್ಸ್ ಮತ್ತು ಹುಮಾರ ಮೂವಿ ಸಂಸ್ಥೆಗಳು ಫಿಲ್ಮ್ಸ್‌ ಮ್ಯಾಕ್ಸ್ ಸಹಯೋಗದೊಂದಿಗೆ ಈ ಚಿತ್ರವನ್ನು ನಿರ್ಮಿಸಿವೆ.

ಕೇವಲ 22ನೇ ವಯಸ್ಸಿನಲ್ಲಿ ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ತಮ್ಮ ಚಿತ್ರವನ್ನು ಪ್ರದರ್ಶಿಸುತ್ತಿರುವ ಕರೆನ್ ಸುವರ್ಣ ಅವರು, ಕೇನ್ಸ್‌ನಲ್ಲಿ ಚಲನಚಿತ್ರ ಪ್ರದರ್ಶಿಸುತ್ತಿರುವ ಭಾರತದ ಅತ್ಯಂತ ಕಿರಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಇದು ಕನ್ನಡ ಮತ್ತು ಹಿಂದಿ ಚಿತ್ರರಂಗಕ್ಕೆ ಸಂದ ದೊಡ್ಡ ಗೌರವವಾಗಿದೆ.






 

 

error: Content is protected !!
Scroll to Top