(ನ್ಯೂಸ್ ಕಡಬ) newsksdaba.com ಏ. 08. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಅಥ್ಲೆಟಿಕ್ಸ್ ಹಾಗೂ ವೇಯ್ಟ್‍ಲಿಫ್ಟಿಂಗ್ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಕ್ರೀಡಾಪಟುಗಳಿಗೆ ಉಚಿತ ಬೇಸಿಗೆ ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗಿದೆ.
ವೇಯ್ಟ್ ಲಿಫ್ಟಿಂಗ್ ತರಬೇತಿ ಶಿಬಿರವು ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಎಪ್ರಿಲ್ 5 ರಿಂದ ಎಪ್ರಿಲ್ 27 ರವರೆಗೆ ಬೆಳಿಗ್ಗೆ 6.30 ರಿಂದ 8:30 ಗಂಟೆಯವರೆಗೆ ಹಾಗೂ ಸಂಜೆ 4.30 ರಿಂದ 7.30 ಗಂಟೆಯವರೆಗೆ (ಸರಸ್ವತಿ ಪುತ್ರನ್ -ವೇಯ್ಟ್‍ಲಿಫ್ಟಿಂಗ್ ತರಬೇತುದಾರರು ಮೊ.ಸಂ: 7019144302) ಅಥ್ಲೆಟಿಕ್ಸ್ ತರಬೇತಿ ಶಿಬಿರ ಮಂಗಳಾ ಕ್ರೀಡಾಂಗಣದಲ್ಲಿ ಎಪ್ರಿಲ್ 5 ರಿಂದ ಎಪ್ರಿಲ್ 27 ರವರೆಗೆ ಬೆಳಗ್ಗೆ 6.30 ರಿಂದ 8:30 ಗಂಟೆಯವರೆಗೆ ಹಾಗೂ ಸಂಜೆ 4.30 ರಿಂದ 7 ಗಂಟೆವರೆಗೆ ( ನವೀನ್ ಗೌಡ ಅಥ್ಲೆಟಿಕ್ಸ್ ತರಬೇತುದಾರರು- ಮೊ. ಸಂ: 8494830078)
ಉಚಿತ ಬೇಸಿಗೆ ತರಬೇತಿ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿ ಕ್ರೀಡಾ ತರಬೇತಿಯ ಸದುಪಯೋಗ ಪಡೆಯಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೇಯ್ಟ್ ಲಿಫ್ಟಿಂಗ್, ಅಥ್ಲೆಟಿಕ್ಸ್ ಉಚಿತ ಬೇಸಿಗೆ ತರಬೇತಿ ಶಿಬಿರ








