(ನ್ಯೂಸ್ ಕಡಬ) newskadaba.com, ಎ.07: ಸೋಮವಾರ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ 89 ಸಾವಿರ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಆವಕದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ.
. ಏಪ್ರಿಲ್ ಮೊದಲ ವಾರದಲ್ಲಿ ಆವಕ ಇಳಿಮುಖವಾಗುತ್ತಾ ಸಾಗಿದೆ. ಸೀಜನ್ ಸಹ ಮುಗಿಯುವ ಸೂಚನೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಗುರುವಾರ 1 ಲಕ್ಷಕ್ಕೂ ಅಧಿಕ ಆವಕಾಗಿದ್ದು, ಈ ವಾರ ಕೇವಲ 89 ಸಾವಿರಕ್ಕೆ ಇಳಿದಿದೆ.
ಉತ್ತಮ ದರ
ಈ ವರ್ಷ ಆವಕ ಕಮ್ಮಿ ಆದರೂ ಸಹ ಗಮನಾರ್ಹ ಸಂಗತಿಯೆಂದರೆ, ದರದಲ್ಲಿ ಪ್ರತಿ ವಾರ ಸ್ಥಿರತೆ ಕಂಡು ಬರುತ್ತಿದೆ. ಈ ವಾರವು ಸಹ ಮೂರು ತಳಿಯ ಮೆಣಸಿನಕಾಯಿ ದರದಲ್ಲಿ ಸ್ಥಿರತೆ ಕಂಡು ಬಂದಿದೆ. ಇದರಿಂದ ಗುಣಮಟ್ಟದ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಮುಂದುವರೆದಿದೆ.
ಸೋಮವಾರ ಮಾರುಕಟ್ಟೆ ದರ ಈ ರೀತಿಯಾಗಿತ್ತು
ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಒಟ್ಟು 89,141 ಚೀಲಗಳು ಆವಕಾಗಿದ್ದು, ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹ 3929 ಗರಿಷ್ಠ ₹ 58.223 ಸರಾಸರಿ ₹ 46,509, ಡಬ್ಬಿತಳಿ ಕನಿಷ್ಠ ₹ 5009 ಗರಿಷ್ಠ ₹ 64449 ಸರಾಸರಿ ₹ 48509, ಗುಂಟೂರು ಕನಿಷ್ಠ ₹ 1300, ಗರಿಷ್ಠ ₹ 17589, ಸರಾಸರಿ ₹ 12689 ಗಳಿಗೆ ಮಾರಾಟವಾಗಿವೆ..









