ಭಾರತೀಯ ಭೂಸೇನೆಯಲ್ಲಿ 24 ವರ್ಷಗಳ ಸುದೀರ್ಘ ಸೇವೆ: ಭೂ ಸೇನೆಯ ಹವಾಲ್ದಾರ್ ಭಾಸ್ಕರ ಕೇಮಟಿ ನಿವೃತ್ತಿ



(ನ್ಯೂಸ್‌ ಕಡಬ) newskadaba.com,  ಮಾ.02: ಹರಿಹರ ಪಲ್ಲತ್ತಡ್ಕ ಗ್ರಾಮದ ಕೇಮಟಿ ಮನೆ ಭೂ ಸೇನೆಯ ಹವಾಲ್ದಾರ್ ಭಾಸ್ಕರ ಅವರು ಮಾ.30 ರಂದು ನಿವೃತ್ತಿ ಹೊಂದಿದರು.ಭಾಸ್ಕರ ಅವರು 2002ರ ಮಾರ್ಚ್ ತಿಂಗಳಲ್ಲಿ ಮಂಗಳೂರು ಮಂಗಳ ಕ್ರೀಡಾಂಗಣದಲ್ಲಿ ಭಾರತೀಯ ಸೇನೆಗೆ ಸೇರಿದರು. ಸೇನೆಯಲ್ಲಿ CFN ಹುದ್ದೆಗೆ ಸೇರಿ, ನಂತರ ಹವಾಲ್ದಾರ್ ಹುದ್ದೆಗೆ ಬಡ್ತಿ ಹೊಂದಿದರು. ತಮ್ಮ ಸೇವಾ ಅವಧಿಯಲ್ಲಿ ಅವರು ಭೋಪಾಲ್,ಅಂಬಾಲಾ, ಕಾರ್ಗಿಲ್, ಜಬಲ್ಪುರ, ಶ್ರೀನಗರ, ಪಶ್ಚಿಮ ಬಂಗಾಳದ ಸುಖ್ನಾ, ಪ್ರಯಾಗರಾಜ್, ಜಮ್ಮು ಕಾಶ್ಮೀರದ ಕುಪ್ವಾರಾ, ಪಂಜಾಬ್ ನ ಪಟಿಯಾಲಾ , ಪೂಣೆ, ಮಹಾರಾಷ್ಟ್ರ ಖಡ್ಕಿ ಮತ್ತು ಸೆಕಂದರಾಬಾದ್ ಮುಂತಾದ ಕಡೆ ಕರ್ತವ್ಯ ನಿರ್ವಹಿಸಿದರು.







 

ಹರಿಹರ ಪಲ್ಲತ್ತಡ್ಕ ಗ್ರಾಮದ ಕೇಮಟಿ ಚೆನ್ನಪ್ಪ ಹಾಗೂ ಪದ್ಮಾವತಿ ದಂಪತಿಗಳ ಮೂವರು ಮಕ್ಕಳಲ್ಲಿ ಹಿರಿಯ ಮಗನಾಗಿ ಭಾಸ್ಕರ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹರಿಹರ ಪಲ್ಲತ್ತಡ್ಕ ದಲ್ಲಿ ಪೂರ್ಣಗೊಳಿಸಿದರು. ನಂತರ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಜೆಒಸಿ ಶಿಕ್ಷಣವನ್ನು ಪಡೆದರು.ಇವರ ಪತ್ನಿ ಭಾರತಿ ಪಿ ಅವರು ಕೆ.ವಿ.ಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಸುಳ್ಯದಲ್ಲಿ ಉದ್ಯೋಗದಲ್ಲಿದ್ದಾರೆ. ಮಕ್ಕಳು ಇದ್ದು, ದಿಶಾನ್ 5ನೇ ತರಗತಿ ಮತ್ತು ದಿವಾನ್ 2ನೇ ತರಗತಿಯಲ್ಲಿ ಓದುತಿದ್ದು ಸುಳ್ಯದ ರೋಟರಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.






error: Content is protected !!
Scroll to Top