ಚಿನ್ನ ಬೆಳ್ಳಿ ದರಗಳು ಮತ್ತೆ ಭಾರಿ ಏರಿಕೆ



(ನ್ಯೂಸ್‌ ಕಡಬ) newskadaba.com,ಎ.01 : ಅಂತರಾಷ್ಟ್ರೀಯ ಯುದ್ಧ ಪರಿಸ್ಥಿತಿಗಳು, ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿರುವುದರಿಂದ ಚಿನ್ನ-ಬೆಳ್ಳಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಡುತ್ತಿರುವ ಹಿನ್ನೆಲೆ ಹಳದಿ ಲೋಹದ ಬೆಲೆ ಮತ್ತೆ ಗಗನಮುಖಿಯಾಗಿದೆ. ಇಂದು ಬರೋಬ್ಬರಿ 1970 ರೂಪಾಯಿ ಏರಿಕೆ ಆಗಿದೆ.

ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಏಪ್ರಿಲ್ 1, 2026, ಬುಧವಾರದಂದು 24 ಕ್ಯಾರೆಟ್ 10 ಗ್ರಾಂ ನಲ್ಲಿ 1970 ರೂ ಏರಿಕೆ ಆಗಿ, 1,51,480 ರೂಪಾಯಿಗೆ ಬೆಲೆ ಏರಿಕೆಯಾಗಿದೆ. 1 ಗ್ರಾಂ ಬೆಲೆ ಇಂದು 197 ರೂ ಹೆಚ್ಚಳ ಕಂಡಿದ್ದು, 15,148 ರೂ ದಾಖಲಾಗಿದೆ..







22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 180 ರೂ ಏರಿಕೆ ಆಗಿ 13,885 ರೂ ಆಗಿದ್ದು 10 ಗ್ರಾಂ ಬೆಲೆಯಲ್ಲಿ 1800 ರೂ ಏರಿಕೆಯಾಗಿ, 1,38,850 ರೂಪಾಯಿಗೆ ತಲುಪಿದೆ.






error: Content is protected !!
Scroll to Top