ಗೂಗಲ್‌ ಮ್ಯಾಪ್‌ ತಂದಿಟ್ಟ ಅನಾಹುತ, ಲಾರಿ ಡಿಕ್ಕಿಯಾಗಿ ಕಾರು ಚಾಲಕ ಮೃತ್ಯು ,ಗೋಡೌನ್‌ಗೆ ಅಗ್ನಿ!!!

(ನ್ಯೂಸ್‌ ಕಡಬ) newskadaba.com,  ಮಾ.27: ಬೆಂಗಳೂರಿನಲ್ಲಿ ಗೂಗಲ್ ಮ್ಯಾಪ್‌ ನಂಬಿ ಓಡಿಸಿದ ಟ್ರಕ್‌ ಚಾಲಕನಿಂದ ದೊಡ್ಡ ಅನಾಹುತವೇ ನಡೆದಿದೆ. ಗೋಡೌನ್‌ಗೆ ಹಾಗೂ ಕಾರಿಗೆ ಟ್ರಕ್ ಡಿಕ್ಕಿ ಆಗಿ ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಸಾವನಪ್ಪಿದ್ದಾರೆ. ಕುರುಬರಹಳ್ಳಿ ಬಳಿ ಈ ಘಟನೆ ನಡೆದಿದೆ. ಮೊದಲು ಕಾರಿಗೆ, ನಂತರ ರಾಜಕಾಲುವೆಗೆ ಡಿಕ್ಕಿ ಹೊಡೆದ ಬಳಿಕ ಟ್ರಕ್‌ ಟ್ಕ್ರಾಪ್‌ ಗೋಡೌನ್‌ಗೆ ನುಗ್ಗಿದೆ.

ಆಂಧ್ರ ಪ್ರದೇಶದಿಂದ ಕಬ್ಬಿಣದ ಸರಳುಗಳನ್ನು ಹೊತ್ತು ಬಂದ ಲಾರಿ ಸುಂಕದಕಟ್ಟೆ ಕಡೆಗೆ ಸಾಗುತ್ತಿತ್ತು. ಗೂಗಲ್ ಮ್ಯಾಪ್ ನೋಡಿಕೊಂಡು ಚಾಲಕ ಲಾರಿ ಓಡಿಸುತ್ತಿದ್ದ. ಕುರುಬರಹಳ್ಳಿ ಮೂಲಕ ಮ್ಯಾಪ್‌ ದಾರಿ ತೋರಿಸಿದೆ. ಆದರೆ ಕುರುಬರಹಳ್ಳಿ ಬಳಿ ಬಹುತೇಕ ಇಳಿಜಾರು ಪ್ರದೇಶ ಇದೆ. ಹಾಗಾಗಿ ತುಂಬಿದ ಲೋಡ್‌ ಇದ್ದ ಲಾರಿ ನಿಯಂತ್ರಣಕ್ಕೆ ಸಿಕ್ಕಿಲ್ಲ.

ಪರಿಣಾಮ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಏರ್‌ಪೋರ್ಟ್ ಪಿಕ್‌ಅಪ್‌ಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಲಾರಿ ಗುದ್ದಿದ ರಭಸಕ್ಕೆ ಕಾರನ್ನು 50 ರಿಂದ 100 ಮೀ ದೂರಕ್ಕೆ ಎಳೆದೊಯ್ದಿದೆ. ಪರಿಣಾಮ ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಸಾವಿಗೀಡಾದ ಯುವಕನನ್ನು ಅಂಬದಾಸ್ (22) ಎಂದು ಗುರುತಿಸಲಾಗಿದೆ. ಈ ವೇಳೆ ಲಾರಿ ಚಾಲಕ ರಾಜಕಾಲುವೆಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ.

 

Scroll to Top