ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ತೈಲ ಬೆಲೆ ಏರಿಕೆ ತಡೆಗೆ ಅಮೆರಿಕ ಮಹತ್ವದ ನಿರ್ಧಾರ – News Kadaba

ತೈಲ ಬೆಲೆ ಏರಿಕೆ ತಡೆಗೆ ಅಮೆರಿಕ ಮಹತ್ವದ ನಿರ್ಧಾರ

(ನ್ಯೂಸ್‌ ಕಡಬ) newskadaba.com, ಮಾ.21 ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತಲೆದೋರಿರುವ ತೈಲ ಅಭಾವ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಟ್ರಂಪ್ ಆಡಳಿತವು ಮಹತ್ವದ ಕ್ರಮ ಕೈಗೊಂಡಿದೆ. ಸಮುದ್ರದಲ್ಲಿ ಸಿಲುಕಿರುವ ಇರಾನ್‌ನ ಕಚ್ಚಾ ತೈಲದ ಮಾರಾಟಕ್ಕೆ ಅನ್ವಯವಾಗುವಂತೆ ೩೦ ದಿನಗಳ ಕಾಲ ನಿರ್ಬಂಧ ಸಡಿಲಿಕೆ ಘೋಷಿಸಲಾಗಿದೆ.

ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಈ ಕುರಿತು ಮಾಹಿತಿ ನೀಡಿದ್ದು, “ಸಮುದ್ರದಲ್ಲಿ ಹಡಗುಗಳಲ್ಲಿರುವ ಸುಮಾರು ೧೪೦ ಮಿಲಿಯನ್ ಬ್ಯಾರೆಲ್ ಇರಾನ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಈ ನಿರ್ಧಾರವು ತಕ್ಷಣವೇ ಜಾರಿಗೆ ಬರಲಿದ್ದು, ಏಪ್ರಿಲ್ ೧೯ ರವರೆಗೆ ಈ ವಿನಾಯಿತಿ ಇರಲಿದೆ,” ಎಂದು ತಿಳಿಸಿದ್ದಾರೆ. ಚೀನಾವು ಇರಾನ್‌ನ ತೈಲವನ್ನು ಅಗ್ಗದ ದರದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿರುವುದನ್ನು ತಡೆಯುವುದು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸುವುದು ಇದರ ಹಿಂದಿನ ಉದ್ದೇಶವಾಗಿದೆ.

“ಇರಾನ್ ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ. ಅಧ್ಯಕ್ಷ ಟ್ರಂಪ್ ಅವರ ‘ಆಪರೇಷನ್ ಎಪಿಕ್ ಫ್ಯೂರಿ’ ಮೂಲಕ ನಾವು ಈ ಹೋರಾಟದಲ್ಲಿ ನಿರೀಕ್ಷೆಗಿಂತ ವೇಗವಾಗಿ ಯಶಸ್ಸು ಸಾಧಿಸುತ್ತಿದ್ದೇವೆ. ಇರಾನ್‌ನ ತೈಲವನ್ನೇ ಅಸ್ತ್ರವಾಗಿ ಬಳಸಿ ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸುವುದು ನಮ್ಮ ಗುರಿ,” ಎಂದು ಬೆಸೆಂಟ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಫೆಬ್ರವರಿ ೨೮ ರಿಂದ ಆರಂಭವಾದ ಇರಾನ್ ಮೇಲಿನ ಸರಣಿ ವೈಮಾನಿಕ ದಾಳಿಗಳು ಇನ್ನೂ ಮುಂದುವರಿದಿವೆ. ಇರಾನ್ ಕೂಡ ತಿರುಗೇಟು ನೀಡುತ್ತಿದ್ದು, ಜಾಗತಿಕ ಪ್ರವಾಸಿ ತಾಣಗಳ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿದೆ. ಯುದ್ಧದ ಹಿನ್ನೆಲೆಯಲ್ಲಿ ತೈಲ ಬೆಲೆ ಗಗನಕ್ಕೇರಿದ್ದು, ಇದು ಅಮೆರಿಕದ ಷೇರು ಮಾರುಕಟ್ಟೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ. ಈ ಆರ್ಥಿಕ ಸಂಕಷ್ಟದಿಂದ ಪಾರಾಗಲು ಟ್ರಂಪ್ ಸರ್ಕಾರ ಈಗ ಇರಾನ್ ತೈಲದ ಮೇಲಿನ ನಿರ್ಬಂಧವನ್ನು ತಾತ್ಕಾಲಿಕವಾಗಿ ಸಡಿಲಿಸಿದೆ.

 

 

Scroll to Top