ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಹಾರ್ಮುಜ್ ಜಲಸಂಧಿ ಬಳಿ ತೈಲ ಸಾಗಿಸುತ್ತಿದ್ದ ಹಡಗಿನಲ್ಲಿ ರಾಂಚಿಯ ವ್ಯಕ್ತಿ ಮೃತ್ಯು – News Kadaba

ಹಾರ್ಮುಜ್ ಜಲಸಂಧಿ ಬಳಿ ತೈಲ ಸಾಗಿಸುತ್ತಿದ್ದ ಹಡಗಿನಲ್ಲಿ ರಾಂಚಿಯ ವ್ಯಕ್ತಿ ಮೃತ್ಯು

(ನ್ಯೂಸ್‌ ಕಡಬ) newskadaba.com, ಮಾ.21: ಹಾರ್ಮುಜ್ ಜಲಸಂಧಿ ಬಳಿ ತೈಲ ಸಾಗಿಸುತ್ತಿದ್ದ ಹಡಗಿನಲ್ಲಿ ರಾಂಚಿಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರ ಮೃತದೇಹವನ್ನು ತಾಯ್ನಾಡಿಗೆ ತರಲು ಸಹಾಯ ಮಾಡುವಂತೆ ಕೇಂದ್ರ ಮತ್ತು ಜಾರ್ಖಂಡ್ ಸರ್ಕಾರಕ್ಕೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ರಾಂಚಿ ಮೂಲದ ಕ್ಯಾಪ್ಟನ್ ರಾಕೇಶ್ ರಂಜನ್ ಮೃತ ವ್ಯಕ್ತಿ. ಫೆಬ್ರವರಿ 2 ರಂದು ಖಾಸಗಿ ಕಂಪನಿಯ ಒಡೆತನದ ‘ASP ಅವನಾ- RPSL-MUM-172’ ಹಡಗನ್ನು ಸೇರಿಕೊಂಡಿದ್ದರು. ಅವರು ಮಾರ್ಚ್ 18 ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಈ ಪ್ರದೇಶದಲ್ಲಿ ಹಡಗು ಸಂಚಾರ ಸ್ಥಗಿತಗೊಂಡ ನಂತರ, ಫೆಬ್ರವರಿ 28 ರಿಂದ ಹಾರ್ಮುಜ್ ಜಲಸಂಧಿಯಿಂದ ಸುಮಾರು 14 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಈ ಹಡಗು ಸಿಲುಕಿಹಾಕಿಕೊಂಡಿತ್ತು.

ನನ್ನ ಸಹೋದರನ ಮೃತದೇಹವನ್ನು ಆದಷ್ಟು ಬೇಗ ವಾಪಸ್ ತರಲು ಸಹಾಯ ಮಾಡುವಂತೆ ನಾನು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ವಿನಂತಿಸುತ್ತೇನೆ. ಕಂಪನಿಯು ಅವರ ಹಣಕಾಸಿನ ಬಾಕಿ ಬಿಡುಗಡೆ ಮಾಡುವಲ್ಲಿ ಯಾವುದೇ ಅಡೆತಡೆ ಆಗಬಾರದು. ಸರ್ಕಾರವು ಈ ವಿಷಯವನ್ನು ಮೇಲ್ವಿಚಾರಣೆ ಮಾಡಬೇಕು. ಮೃತದೇಹವನ್ನು ಮರಳಿ ತರಲು ಸಹಾಯ ಕೋರಿ ಸಿಎಂ ಸೊರೇನ್ ಮತ್ತು ರಾಂಚಿ ಸಂಸದ ಸಂಜಯ್ ಸೇಠ್ ಅವರಿಗೆ ಪತ್ರಗಳನ್ನು ಕಳುಹಿಸಲಾಗಿದೆ ಎಂದು ಅವರ ಹಿರಿಯ ಸಹೋದರ ಉಮೇಶ್ ಸಿಂಗ್ ತಿಳಿಸಿದ್ದಾರೆ.

Scroll to Top